ಬೆಂಗಳೂರು : ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಆರಂಭದಲ್ಲಿ ಕೊಂಚ ಬೇಸರ ತರಿಸಿದ್ದ ಬಿಗ್ ಬಾಸ್ ಶೋ ನಂತರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಈ ವಾರ ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ್ದಾರೆ ಎನ್ನಲಾಗಿದೆ. ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ ಸಿಕ್ಕಾಪಟ್ಟೆ ಟಾರ್ಗೆಟ್ ಮಾಡ್ತಿದ್ರು ಯಾವುದಕ್ಕೂ ಅಂಜದೇ ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್ ಎನ್ನುತ್ತಲ್ಲೇ ಆಟ ಆಡುತ್ತಿದ್ರು, ಆದರೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಫೈನಲ್ ಹಂತಕ್ಕೆ ಹೋಗುತ್ತಿದ್ದು, ಕೆಲವೇ ದಿನಗಳಲ್ಲಿ ಫಿನಾಲಿ ನಡೆಯಲಿದೆ. ಬಿಗ್ ಬಾಸ್ -11 ವಿನ್ನರ್ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.