ಬೆಂಗಳೂರು : ಬೆಂಗಳೂರಿನಲ್ಲಿ ಆನ್ ಲೈನ್ ಗೇಮ್ ಗೀಳಿಗೆ ಇಬ್ಬರು ಯುವಕರು ಬಲಿಯಾದ ಘಟನೆ ವರದಿಯಾಗಿದೆ.
ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ 26 ವರ್ಷದ ಯುವಕ ನೇಣಿಗೆ ಶರಣಾಗಿದ್ದಾರೆ. ಲಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿಜಯನಗರ ಮೂಲದ ಮಲ್ಲಿಕಾರ್ಜುನ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದರು, ಆಟ ಆಡಲು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೇ ಅವರು ಮೃತಪಟ್ಟಿದ್ದಾರೆ.ಮಹದೇವ ಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಮತ್ತೋರ್ವ ಆಟೋ ಚಾಲಕ ಕೂಡ ಆನ್ ಲೈನ್ ಗೇಮ್ ಗೀಳಿಗೆ ಬಲಿಯಾಗಿದ್ದಾರೆ. ಪತ್ನಿ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಆಟೋ ಚಾಲಕ ಆನ್ ಲೈನ್ ಗೇಮ ಗೀಳಿನ ಚಟಕ್ಕೆ ದಾಸರಾಗಿದ್ದರು. ಸಾಲ ತೀರಿಸಲಾಗದೇ ಅವರು ಮೃತಪಟ್ಟಿದ್ದಾರೆ.