ಬೆಂಗಳೂರು : ಪಿಜಿಯಲ್ಲಿ ಕೈ ಕುಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಪೊಲೀಸರು ಧಾವಿಸಿದ ಹಿನ್ನೆಲೆ ಯುವಕನ ಪ್ರಾಣ ಉಳಿದಿದೆ.
ಕೇರಳ ಮೂಲದ ಯುವಕ ಜಿತಿನ್ ಎಂಬ ಯುವಕ ಬೆಂಗಳೂರಿನ ಪಿಜಿಯೊಂದರಲ್ಲಿ ನೆಲೆಸಿದ್ದನು. ಪಿಜಿಯಲ್ಲಿದ್ದುಕೊಂಡು ಕೆಲಸ ಹುಡುಕುತ್ತಿದ್ದನು. ಅಲ್ಲದೇ ಜಿತಿನ್ ಸಾಕಷ್ಟು ಕೌಟುಂಬಿಕ ಸಮಸ್ಯೆಗಳಿಂದ ಮನ ನೊಂದಿದ್ದನು. ತಂದೆಗೆ ಕ್ಯಾನ್ಸರ್ ಇತ್ತು, ಅಲ್ಲದೇ ಈತ ತನ್ನ ಪ್ರಿಯತಮೆ ಜೊತೆ ಜಗಳ ಕೂಡ ಮಾಡಿದ್ದನು.
ಈ ಎಲ್ಲಾ ವಿಚಾರಕ್ಕೆ ಬೇಸತ್ತ ಜಿತಿನ್ ಮದ್ಯ ಸೇವಿಸಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲೇ ಬೀಟ್ ನಲ್ಲಿದ್ದ ಪೊಲೀಸರು ವಿಚಾರ ತಿಳಿದು ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮಾದೇವಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.