ಕಲಬುರಗಿ: ಕೋರ್ಟ್ ಆವರಣದಲ್ಲೇ ಯುವಕನ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಕೋರ್ಟ್ ನಲ್ಲಿ ನಡೆದಿದೆ.
ಹಾಡಹಗಲೇ ಕೋರ್ಟ್ ಆವರಣದಲ್ಲಿ ಯುವಕನ ತಲೆ ಮೇಲೆ ಮೂವರು ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದಾರೆ. ದೇವೇಂದ್ರಪ್ಪ ಎಂಬಾತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದಾರೆ.
ಸಿದ್ದು, ಶಿವಲಿಂಗಪ್ಪ, ಶ್ರೀಶೈಲ್ ಎಂಬ ಮೂವರು ದೇವೇಂದ್ರಪ್ಪನನ್ನು ಹಿಡಿದು ಆತನ ತಲೆ ಮೇಲೆ ಕಲ್ಲು ಎತ್ತುಹಾಕಿ ಹಲ್ಲೆ ನಡೆಸಿದ್ದಾರೆ.