ಕುಲದೀಪ್ ಕರಿಯಪ್ಪ ನಿರ್ದೇಶನದ ನವೀನ್ ಶಂಕರ್ ಅಭಿನಯದ ನೋಡಿದವರು ಏನಂತಾರೆ ಚಿತ್ರದ ಮಲಗಿರು ಕಂದ ಎಂಬ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಸಾಧು ಕೋಕಿಲ ಈ ಹಾಡಿಗೆ ಧ್ವನಿಯಾಗಿದ್ದು ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದು, ನವೀನ್ ಶಂಕರ್ ಸೇರಿದಂತೆ ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್ (ಅಕ್ಷತಾ ರಾವ್) ಐರಾ ಕೃಷ್ಣ, ರಾಜೇಶ್ ತಾರಾಂಗಣದಲ್ಲಿದ್ದಾರೆ. ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ ನೀಡಿದ್ದು, ಮನು ಶೇಡ್ಗಾರ್ ಸಂಕಲನ, ಕುಲದೀಪ್ ಕಾರ್ಯಪ್ಪ, ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.