ಮೀರತ್(ಉತ್ತರ ಪ್ರದೇಶ): ಒಂದೇ ಕುಟುಂಬದ ಐವರು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನ ಲಿಸಾರಿ ಗೇಟ್ ಪ್ರದೇಶದಲ್ಲಿ ನಡೆದಿದೆ.
ಮೃತರಲ್ಲಿ ಪತಿ, ಆತನ ಪತ್ನಿ ಮತ್ತು ಅವರ ಮೂವರು ಹೆಣ್ಣುಮಕ್ಕಳು ಸೇರಿದ್ದಾರೆ. ಐವರನ್ನು ಕೊಂದು ಗೋಣಿ ಚೀಲದಲ್ಲಿ ಮೂಟೆ ಕಟ್ಟಿದ್ದಾನೆ. ದಂಪತಿಗಳ ಶವಗಳು ನೆಲದ ಮೇಲೆ ಪತ್ತೆಯಾಗಿದ್ದರೆ, ಮಕ್ಕಳ ಶವಗಳು ಬೆಡ್ ಬಾಕ್ಸ್ ಒಳಗೆ ಪತ್ತೆಯಾಗಿದೆ.
ಎಲ್ಲಾ ಐದು ಬಲಿಪಶುಗಳಿಗೆ ತಲೆಗೆ ಗಾಯಗಳಾಗಿದ್ದು, ಭಾರವಾದ ವಸ್ತುವಿನಿಂದ ಉಂಟಾಗಿರಬಹುದು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ, ಇದು ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದ ಕೊಲೆ ಪ್ರಕರಣವೆಂದು ತೋರುತ್ತದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ತನಿಖೆ ವೇಗವಾಗಿ ನಡೆಯುತ್ತಿದೆ ಎಂದು ಎಸ್ಎಸ್ಪಿ ವಿಪಿನ್ ಟಾಡಾ ಹೇಳಿದ್ದಾರೆ.
#WATCH | Uttar Pradesh: Bodies of a couple and their three children recovered from a house in Meerut (09/01) pic.twitter.com/nnRtw6OEEk
— ANI (@ANI) January 10, 2025
ಬುಧವಾರ ಸಂಜೆಯಿಂದ ಕುಟುಂಬ ಗೈರುಹಾಜರಾದ ಬಗ್ಗೆ ನೆರೆಹೊರೆಯವರು ಕಳವಳ ವ್ಯಕ್ತಪಡಿಸಿದ ನಂತರ ಈ ಭಯಾನಕ ದೃಶ್ಯ ಬೆಳಕಿಗೆ ಬಂದಿದೆ. ಮನೆಗೆ ಹೊರಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಛಾವಣಿಯ ಮೂಲಕ ನಿವಾಸವನ್ನು ಪ್ರವೇಶಿಸಿ ದೃಶ್ಯವನ್ನು ಬಹಿರಂಗಪಡಿಸಿದರು. ದೃಶ್ಯಗಳು ಮನೆ ಸಂಪೂರ್ಣ ಅಸ್ತವ್ಯಸ್ತವಾಗಿರುವುದನ್ನು ತೋರಿಸಿದೆ.
यूपी के मेरठ में एक ही परिवार के 3 बच्चों समेत 5 लोगों की निर्मम हत्या,लाशे को बिस्तर में बंद किया,1 साल की बच्ची को भी नहीं बक्शा हत्यारे ने..पुलिस जांच में जुटी#Meerut pic.twitter.com/DcrkTsTbu5
— ANMOL Sharma (@anmolmeeruthiya) January 9, 2025