ಬೆಳಗಾವಿ : ನಾಗಾಲ್ಯಾಂಡ್ ನಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿದ್ದು, ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ.
ನಿಂಗೆನಟ್ಟಿ ಗ್ರಾಮದ ಯೋಧ ರವಿ ಯಲ್ಲಮ್ಮ ತಳವಾರ (35) ಅವರು ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರವಿ ಅವರು ನಾಗಾಲ್ಯಾಂಡ್ ನ ಅಸ್ಸಾಂ ರೈಫಲ್ಸ್ ನ 41 ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಗಾಲ್ಯಾಂಡ್ ನ ಘಾಟಿಯ ಆಳವಾದ ಕಂದಕಕ್ಕೆ ಸೇನಾ ವಾಹನ ಬಿದ್ದ ಪರಿಣಾಮ ರವಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ 16 ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.