ನಾಗ್ಪುರ: ಕೋಳಿ ತಿಂದಿದ್ದ ಮೂರು ಹುಲಿಗಳು ಹಾಗೂ ಚಿರತೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹಕ್ಕಿಜ್ವರದಿಂದ ಈ ದುರಮ್ತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ನಾಗ್ಪುರದ ಪ್ರಾಣಿರಕ್ಷಣಾ ಕೇಂದ್ರದ ಮೂರು ಹುಲಿಗಳು ಹಾಗೂ ಒಂದು ಚಿರತೆ ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ. ಹಕ್ಕಿಜ್ವರ ಸೋಂಕಿಗೆ ಒಳಗಾಗಿದ್ದ ಚಿಕನ್ ತಿಂದು ಹುಲಿ, ಚಿರತೆಗಳು ಸಾವನ್ನಪ್ಪಿರುವ ಶಂಕೆ ಇದೆ ಎಂದು ಅರಣ್ಯ ಸಚಿವ ಗಣೇಶ್ ನಾಯ್ಕ್ ತಿಳಿಸಿದ್ದಾರೆ.
ಹುಲಿಗಳು ಹಾಗೂ ಚಿರತೆ ಸಾವಿನ ಬಗ್ಗೆ ವೈಜ್ಞಾನಿಕ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ವರದಿ ಬಳಿಕವಷ್ಟೇ ಈ ಬಗ್ಗೆ ದೃಢವಾಗಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸೋಂಕಿತ ಕೋಳಿ ಸೇವಿಸಿ ಇವುಗಳು ಸಾವನ್ನಪ್ಪಿರಬಹುದು ಎಂದು ತಿಳಿಸಿದ್ದಾರೆ.
ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು, ಪ್ರಾಣಿಗಳಿಗೆ ನೀಡಿರುವ ಆಹಾರದವನ್ನು ಪರಿಶೀಲಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.