ರಾಯಚೂರು: ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಹುಲಿರಾಜ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಸದ್ಯ ಹುಲಿರಾಜ್ ಮನೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ರಾಯಚೂರಿನ ಐಡಿಎಂಸಿ ಬಡಾವಣೆಯಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಇದುವರೆಗೆ 1.38 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
1.20 ಕೋಟಿ ರೂ. ಮೌಲ್ಯದ ಎರಡು ಮನೆ, ಮೂರು ನಿವೇಶನ ಹಾಗೂ 24 ಎಕರೆ ಕೃಷಿ ಜಮೀನು ಇರುವುದು ಗೊತ್ತಾಗಿದೆ. 17.88 ಲಕ್ಷ ಹಣ, 4.3 ಲಕ್ಷದ ಗೃಹೋಪಯೋಗಿ ವಸ್ತುಗಳು, 12.5 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿದೆ. ಪರಾರಿಯಾಗಿರುವ ಹುಲಿರಾಜ್ ಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.