ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮ್ಮುಖದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 6 ಲಕ್ಸಲರು ಶರಣಾಗಿದ್ದಾರೆ.
ನಕ್ಸಲರ ಶರಣಾಗತಿಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ ಆದಷ್ಟು ಬೇಗನೆ ನ್ಯಾಯ ಸಿಗುವಂತೆ ಮಾಡುತ್ತೇವೆ. ಶರಣಾದ ನಕ್ಸಲರಿಗೆ ಸರ್ಕಾರದಿಂದ ಎಲ್ಲಾ ಪರಿಹಾರ ನೀಡುತ್ತೇವೆ. ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ಜೊತೆಗೂ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
ಯೋಜನೆಯ ಕೆಟಗರಿಯ ಪ್ರಕಾರ ಶರಣಾದ ನಕ್ಸಲರಿಗೆ ಪರಿಹಾರ ನೀಡುತ್ತೇವೆ. ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಬರಲು ಸರ್ಕಾರ ಪ್ರಯತ್ನಿಸುತ್ತದೆ. ಕಾನೂನಿನ ಪ್ರಕಾರ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಶಸ್ತ್ರಾಸ್ತ್ರದ ಮೂಲಕ ಯಾವುದೇ ನ್ಯಾಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನಾತ್ಮಕ ಹಕ್ಕುಗಳ ಮೂಲಕ ಹೋರಾಟದಿಂದ ಸಾಧ್ಯವಿದೆ. ನಾಗರೀಕ ಸಮಿತಿಯ ಮೂಲಕ ನಕ್ಸಲರ ಮನವೊಲಿಸಿ ಮುಖ್ಯ ವಾಹಿನಿಗೆ ಕರೆತರಲಾಗಿದೆ. ಮನವೊಲಿಕೆಯ ನಂತರ 6 ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದಾರೆ. ಸರ್ಕಾರಕ್ಕೆ ಶರಣಾದ ನಕ್ಸಲರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.