ತುಮಕೂರು: ಕಾಂಗ್ರೆಸ್ ನಾಯಕರ ನಿವಾಸದಲ್ಲಿ ಸಾಲು ಸಾಲು ಡಿನ್ನರ್ ಮಿಟಿಂಗ್ ಗೆ ಹೈಕಮಾಂಡ್ ಬ್ರೇಕ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್.ರಾಜಣ್ಣ, ಮೊನ್ನೆಯಷ್ಟೇ ನಡೆದ ಒಂದು ಡಿನ್ನರ್ ಮೀಟಿಂಗ್ ನಿಂದ ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಇದೇ ರೀತಿ ಗೊಂದಲಗಳು ಮುಂದುವರೆಯುವುದು ಬೇಡ ಎಂಬ ಕಾರಣಕ್ಕೆ ಹೈಕಮಾಂಡ್ ನಾಯಕರು ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಬೇಡ ಎಂದಿದ್ದಾರೆ. ಆ ಕಾರಣಕ್ಕೆ ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಆಗಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಬೇಸರವಾಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಅವರನ್ನೇ ಕೇಳಬೇಕು. ಡಿ.ಕೆ.ಶಿವಕುಮಾರ್ ಗೆ ಬೇಜಾರಾಗಲು ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೇವಾ? ಇದೆಲ್ಲವೂ ಸುಮ್ಮನೇ ಚರ್ಚೆ ಅಗತ್ಯವಿಲ್ಲ ಎಂದರು.
ಎಸ್ ಸಿ, ಎಸ್ ಟಿ ಕೋಟಾದಡಿ ಕಾಲೇಜಿನಲ್ಲಿ ಅಡ್ಮಿಷನ್ ಆದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಇಲ್ಲ, ಹಾಸ್ಟೇಲ್ ಗಳೂ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಭೆ ಕರೆದರೆ ಸಭೆಯನ್ನೇ ಮಾಡುವುದು ಬೇಡ ಎಂದರೆ ಇವರೆಲ್ಲ ಎಸ್ ಸಿ ಎಸ್ ಟಿ ವಿರೋಧಿಗಳಾ? ಇದೆಲ್ಲ ಬಹಳ ದಿನ ನಡೆಯಲ್ಲ ಎಂದು ಗುಡುಗಿದರು.