ಅಸ್ಸಾಂ : ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.
ನೌಕಾಪಡೆ, ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಯ ತಂಡವು ದಿಮಾ ಹಸಾವೊದ ಅಸ್ಸಾಂ ಕಲ್ಲಿದ್ದಲು ಕ್ವಾರಿಯ ಗಣಿಯೊಳಗೆ ಸಿಲುಕಿರುವ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
“21 ಪ್ಯಾರಾ ಡೈವರ್ಗಳು ಬಾವಿಯ ತಳದಿಂದ ನಿರ್ಜೀವ ದೇಹವನ್ನು ಹೊರತೆಗೆದಿದ್ದಾರೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬದೊಂದಿಗೆ ಇವೆ” ಎಂದು ಸಿಎಂ ಬಿಸ್ವಂತ್ ಶರ್ಮಾ ಟ್ವೀಟ್ ಮಾಡಿದ್ದಾರೆ.