ಬೆಂಗಳೂರು : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗಿ ನಟಿ ರಮ್ಯಾ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ಅವರು ಹಾಜರಾಗಿದ್ದಾರೆ .ಚಿತ್ರದಲ್ಲಿ ನನ್ನ ದೃಶ್ಯವನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಹಾಸ್ಟೆಲ್ ಹುಡುಗರಿಗೆ ನಟಿ ರಮ್ಯಾ ನೋಟಿಸ್ ನೀಡಿದ್ದರು. ಅಲ್ಲದೇ ಚಿತ್ರಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ನಟಿ ರಮ್ಯಾ ಕಮರ್ಷಿಯಲ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಕೇಸ್ ಗೆ ಸಂಬಂಧಿಸಿದಂತೆ ರಮ್ಯಾ ಕೋರ್ಟ್ ಗೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಮ್ಯಾ ಒಂದೊಳ್ಳೆ ಸ್ಕ್ರಿಫ್ಟ್ ಸಿಕ್ಕರೆ ಸಿನಿಮಾದಲ್ಲಿ ನಟಿಸುವುದಾಗಿ ಅವರು ಹೇಳಿದ್ದಾರೆ. ಹಾಸ್ಟೆಲ್ ಹುಡುಗರು’ ಸಿನಿಮಾದಲ್ಲಿ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ, ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೋ, ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ನಟಿ ಡಿಮ್ಯಾಂಡ್ ಮಾಡಿದ್ದರು. ಅಲ್ಲದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟೀಸ್ ನಲ್ಲಿ ಒತ್ತಾಯಿಸಿದ್ದರು. ನನ್ನ ಪರ್ಮಿಷನ್ ಇಲ್ಲದೇ ನನ್ನ ಯಾವ ದೃಶ್ಯಗಳನ್ನು ಬಳಸಬಾರದು, ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಕಮರ್ಷಿಯಲ್ ಕೋರ್ಟ್ ಮೂಲಕ ನಟಿ ರಮ್ಯಾ ನೋಟಿಸ್ ನೀಡಿದ್ದರು. ನಂತರ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಹಾಸ್ಟೆಲ್ ಹುಡುಗರು ಚಿತ್ರತಂಡಕ್ಕೆ ರಿಲೀಫ್ ನೀಡಿತ್ತು.