ಬೆಂಗಳೂರು: ಕಾಂಗ್ರೆಸ್ ನಾಯಕರಿಂದ ಸಾಲು ಸಾಲು ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಅವರಿಗೆ ಬೀಳ್ಕೊಡುಗೆ ಸಮಾರಂಭ ಕೊಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಳ್ಕೊಡುಗೆ ಸಮಾರಂಭ ಮಾಡ್ತಿದ್ದಾರೆ. ಅಧಿಕಾರ ಒದ್ದು ಕಿತ್ತುಕೊಳ್ತೀನಿ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇವರಿಗೆ ಡಿಸೆಂಬರ್ ವರೆಗೆ ಡೆಡ್ ಲೈನ್ ಇದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಡಿನ್ನರ್ ಫೇರ್ ವೆಲ್ ಇದ್ದಂತೆ. ಮೇಯರ್ ಅವಧಿ ಮುಗಿದ ಮೇಲೆ ಬಿಳ್ಕೊಡುಗೆ ಇಟ್ಟುಕೊಳ್ತಿದ್ವಿ. ಆ ರೀತಿ ಆಗಿದೆ ಇವರ ಡಿನ್ನರ್ ಮೀಟಿಂಗ್ ಗಳು ಎಂದು ಟಾಂಗ್ ನೀಡಿದರು.
ಡಿ.ಕೆ ಯಾವಾಗ ಡಿನ್ನರ್ ಹಾಕಿಸ್ತಾರೋ ಆಗ ಈ ಸರ್ಕಾರ ಬೀಳುತ್ತೆ. 20 ಬಾರಿ ನಾನೇ ಮುಖ್ಯಮಂತ್ರಿ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಈ ರೀತಿ ಪಡೆ ಪದೆ ಹೇಳಿರಲಿಲ್ಲ ಎಂದು ಹೇಳಿದರು.