ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪುಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
‘ದೇವಮಾನವ’ ಅಸಾರಾಮ್ ಬಾಪು ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ, ಜೈಲಿನ ಹೊರಗೆ ಅವರ ಅನುಯಾಯಿಗಳನ್ನು ಭೇಟಿಯಾಗುವುದನ್ನು ನಿರ್ಬಂಧಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಅಸಾರಾಮ್ ಬಾಪು ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ 16 ವರ್ಷದ ವಿದ್ಯಾರ್ಥಿನಿ ಪ್ರಕರಣ ದಾಖಲಿಸಿದ್ದಳು. ರಾಜಸ್ಥಾನದ ಆಶ್ರಮದಲ್ಲಿ ವಾಸುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅಸ್ಸಾರಾಂ ಬಾಪು ಲೈಂಗಿಕ ದೌರ್ಜನ್ಯವೆಸಗಿದ್ದರು.
ಪ್ರಕರಣ ಸಂಬಂಧ 2013ರ ಸೆಪ್ಟೆಂಬರ್ ನಲ್ಲಿ ಅಸಾರಾಮ್ ಬಾಪು ಸೇರಿದಂತೆ ಮೂವರನ್ನು ಇಂದೋರ್ ನಲ್ಲಿ ಬಂಧಿಸಲಾಗಿತ್ತು.