‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ರಚನಾ ಇಂದರ್ ನಾಯಕಿ 07-01-2025 9:40AM IST / No Comments / Posted In: Featured News, Live News, Entertainment ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶಿಸಿರುವ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿದ್ದು, ಇದೀಗ ನಾಯಕಿಯನ್ನು ಪರಿಚಯಿಸಲಾಗಿದೆ. ಸ್ಯಾಂಡಲ್ವುಡ್ ನಲ್ಲಿ ಸಕ್ಕತ್ ಬ್ಯುಸಿಯಾಗಿರುವ ನಟಿ ರಚನಾ ಇಂದರ್ ಈ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರತಂಡ ರಚನಾ ಇಂದರ್ ಅವರ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಸ್ವಾಗತ ಕೋರಿದೆ. ಈ ಚಿತ್ರವನ್ನು ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಿರುತೆರೆ ನಟ ಮುಕೇಶ್ ಗೌಡ ಹಾಗೂ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ, ದೀಪಕ್ ಯರಗೇರಾ ಛಾಯಾಗ್ರಹಣವಿದೆ. View this post on Instagram A post shared by Theertharoopa Thandeyavarige / Priyamaina Nannaku (@theertharoopa_thandeyavarige)