ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ/ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
2. ಯೋಜನೆಗೆ ಅರ್ಹ ಅವಲಂಬಿತರು ಯಾರು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “ಕುಟುಂಬ” (Familly) ಅಂದರೆ,
a. ಸರ್ಕಾರಿ ನೌಕರರ ಪತಿ ಅಥವಾ ಪತ್ನಿ
b. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
C. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ)
3. KASS ಯೋಜನೆಗೆ ಒಳಪಡದ ನೌಕರರ ವರ್ಗ
ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯಲ್ಲಿನ ‘ಆರೋಗ್ಯ ಭಾಗ್ಯ’ ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.
ರಾಜ್ಯ ಸೇವೆಯಲ್ಲಿ ನಿಯೋಜನೆ/ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ (Establishment in public sector) ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ “ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟಪಡಿಸಲಾದ ಸ್ಥಾಪನೆಗಳ ನೌಕರರು”.
ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ನ್ಯಾಯಾಂಗ ಸೇವೆಯ ಅಧಿಕಾರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಲಯದ ನೌಕರರು ಈ ಯೋಜನೆ ಒಳಪಡುವುದಿಲ್ಲ.
ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು.
ರಾಜ್ಯ ವಿಧಾನಮಂಡಲದ ನೌಕರರು.
4. KASS ಅಡಿಯಲ್ಲಿ “ಕುಟುಂಬ” ಪದದ ವ್ಯಾಖ್ಯಾನವೇನು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “ಕುಟುಂಬ” ಎಂದರೆ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಎಂದು ವ್ಯಾಖ್ಯಾನಿಸಲಾಗಿದೆ.
5. ಸರ್ಕಾರಿ ನೌಕರನು ವೃತ್ತಿಪರ (Probationary period) ಅವಧಿಯಲ್ಲಿದ್ದರೆ KASS ಯೋಜನೆಗೆ ಫಲಾನುಭವಿ ಆಗಬಹುದೇ?
ಹೌದು. ವೃತ್ತಿಪರ (Probationary period) ಅವಧಿಯಲ್ಲಿರುವ ಸರ್ಕಾರಿ ನೌಕರನು KASS ಯೋಜನೆಗೆ ಅರ್ಹನಾಗಿರುತ್ತಾನೆ.
6. ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಇಬ್ಬರೂ ವಂತಿಗೆಯನ್ನು ಸಲ್ಲಿಸಬೇಕಾ?
ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಹೆಚ್ಚಿನ ಮೂಲ ವೇತನವನ್ನು ಪಡೆಯುವ ಉದ್ಯೋಗಿ ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳುತ್ತಾರೆ. ಆದರೆ ಇಬ್ಬರೂ ಉದ್ಯೋಗಿಗಳು ತಮ್ಮ ಪೋಷಕರನ್ನು ಅವಲಂಬಿತರನ್ನಾಗಿ ಸೇರಿಸಲು ಬಯಸಿದರೆ, ಇಬ್ಬರೂ ಪ್ರತ್ಯೇಕವಾಗಿ ಯೋಜನೆಗೆ ನೊಂದಾಯಿಸಿಕೊಳ್ಳತಕ್ಕದ್ದು.
7. ಮಲಮಕ್ಕಳಿಗೆ KASS ಸೌಲಭ್ಯಗಳನ್ನು ಅನುಮತಿಸಲಾಗಿದೆಯೇ?
ಹೌದು,
8. KASS ಸೌಲಭ್ಯಗಳಿಗಾಗಿ ಕುಟುಂಬದ ಸದಸ್ಯರ ಅಡಿಯಲ್ಲಿ ಅವಲಂಬಿತ ಅತ್ತೆಯನ್ನು ಸೇರಿಸಬಹುದೇ?
ಒಬ್ಬ ಮಹಿಳಾ ಸರ್ಕಾರಿ ನೌಕರನು ತನ್ನ ತಂದೆ-ತಾಯಿಯನ್ನು ಅಥವಾ ಅತ್ತೆ-ಮಾವರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದು, ಕೆ.ಎ.ಎಸ್.ಎಸ್ ಅಡಿಯಲ್ಲಿ KASS ನಿಯಮದಂತೆ ಸರ್ಕಾರಿ ನೌಕರರನೊಂದಿಗೆ ವಾಸವಾಗಿದ್ದು ಕನಿಷ್ಠ ಮಾಸಿಕ ಆದಾಯ ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
9. KASS ಯೋಜನೆಯಲ್ಲಿ ಅವಲಂಬಿತರಾಗಿರುವ ಪುತ್ರರು / ಹೆಣ್ಣುಮಕ್ಕಳಿಗೆ ಯಾವುದೇ ವಯಸ್ಸಿನ ಮಿತಿ ಇದೆಯೇ?
ಹೆಣ್ಣು ಅಥವಾ ಗಂಡು ಮಕ್ಕಳು ಗಳಿಸಲು ಪ್ರಾರಂಭಿಸುವವರೆಗೆ (ಉದ್ಯೋಗ) ಅಥವಾ 30ವರ್ಷ ವಯಸ್ಸನ್ನು ತಲುಪುವವರೆಗೆ ಅಥವಾ ಮದುವೆಯಾಗುವವರೆಗೆ ಅರ್ಹನಾಗಿರುತ್ತಾರೆ. ಆದಾಗ್ಯೂ, ಮಕ್ಕಳು ಯಾವುದೇ ರೀತಿಯ (ದೈಹಿಕ ಅಥವಾ ಮಾನಸಿಕ) ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಅವರು KASS ಪ್ರಯೋಜನಗಳಿಗೆ ಅರ್ಹನಾಗಿರುತ್ತಾರೆ.
10. KASS ನೊಂದಾಯಿತ (Empaneled) ಆಸ್ಪತ್ರೆಗಳಲ್ಲಿ ಅನುಮೋದಿಸಲಾದ ವಾರ್ಡ್ ಅರ್ಹತೆಯ ಮಾನದಂಡಗಳು ಯಾವುವು?
Group A & B – “Private Ward”
Group C – “Semi Private Ward”
Group D -“General Ward”
11. ಫಲಾನುಭವಿಯು ನಿಗದಿಪಡಿಸಿರುವ ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್ ಪಡೆಯಲು (Ward Up gradation) ಯೋಜನೆಯಲ್ಲಿ ಅವಕಾಶವಿದೆಯೇ?
ಇಲ್ಲ, ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ (Ward Up gradation) ಪಡೆಯಲು. ಫಲಾನುಭವಿಯು ವ್ಯತ್ಯಾಸದ ಹಣವನ್ನು ಪಾವತಿಮಾಡಿ ರಶೀದಿಯನ್ನು ಪಡೆಯಬಹುದಾಗಿದೆ.
12. ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ಫಲಾನುಭವಿಗೆ ಯಾವ ದಾಖಲೆಯ ಅಗತ್ಯವಿದೆ?
ಫಲಾನುಭವಿಯ ನೊಂದಾಯಿತ ಸಮಯದಲ್ಲಿ ನೀಡುವ ಡಿ.ಡಿ.ಓ ಇ-ಸಹಿ ಹೊಂದಿರುವ ಧೃಡಿಕರಣ ಪತ್ರ ಅಥವಾ KASS ಕಾರ್ಡ್ ಅವಶ್ಯಕತೆ ಇರುತ್ತದೆ.
13. ರೆಫರಲ್ ಅಗತ್ಯವಿದೆಯೇ? ರೆಫರಲ್ ಉದ್ದೇಶಕ್ಕಾಗಿ ತಜ್ಞರು ನೋಂದಾಯಿತ (Empaneled) ಮಾಡಲಾದ ಆಸ್ಪತ್ರೆಯ ಹೆಸರನ್ನು ಸೂಚಿಸಬೇಕೇ?
ಸರ್ಕಾರಿ ವೈದ್ಯರಿಂದ ಯಾವುದೇ ನಿರ್ದೇಶನದ (ರೆಫರಲ್) ಅಗತ್ಯವಿಲ್ಲ. ಕೆಲವೊಂದು ಚಿಕಿತ್ಸೆಗೆ (IVE, Replacement, Transplant) ಚಿಕಿತ್ಸೆಗಳಿಗೆ ನಿಗದಿ ಪಡಿಸಿದ ಅನುಮೋದನೆಯೊಂದಿಗೆ ಮಂಜೂರಾತಿ ಕ್ರಮ ಕೈಗೊಳ್ಳಲಾಗುವುದು.
14. KASS ನ ಅಡಿಯಲ್ಲಿ ಪಾವತಿಸಲಾಗುವ ಚಿಕಿತ್ಸಾ ವೆಚ್ಚದ ಅರ್ಹತದಾಯಕ ಮೊತ್ತ ಎಷ್ಟು?
CGHS ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆ ಆಧಾರದ ಮಿತಿಯಲ್ಲಿ ಯಾವುದೇ ಹೊರಮಿತಿ ಇಲ್ಲದ ಪಾವತಿಸಲಾಗುವುದು.
15. KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಎಲ್ಲಿ ಪಡೆಯಬಹುದು?
KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಎಎಸ್ಎಸ್ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಫಲಾನುಭವಿಗಳು ಸೇವೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಮತ್ತು ನಿಯಮಾನುಸಾರ ಹಿಂಬರಿಸಿಕೊಳ್ಳಲು ಅರ್ಹರಿರುತ್ತಾರೆ.
16. ಮೊದಲ ಹಂತದಲ್ಲಿ KASS ನಲ್ಲಿ ನೀಡುವ ಸೌಲಭ್ಯಗಳೇನು?
ಮೊದಲ ಹಂತದಲ್ಲಿ KASS ನ ಅಡಿಯಲ್ಲಿ ಒಳರೋಗಿ ಚಿಕಿತ್ಸೆ, ಹಗಲು ಚಿಕಿತ್ಸಾ ಕೇಂದ್ರ (Day Care), ಕಣ್ಣಿನ ಚಿಕಿತ್ಸಾ ಆಸ್ಪತ್ರೆ ಮತ್ತು ದಂತ ಚಿಕಿತ್ಸಾ ಆಸ್ಪತ್ರೆಗಳು.
17. ಮೊದಲ ಹಂತದಲ್ಲಿ KASS ನಡಿಯಲ್ಲಿ ಹೊರ ರೋಗಿ ಚಿಕಿತ್ಸೆಗೆ ಸೌಲಭ್ಯವಿದೆಯೇ?
ಇಲ್ಲ, KASS ಫಲಾನುಭವಿಗಳು ಮುಂದಿನ ಆದೇಶದವರೆಗೆ ಹೋರರೋಗಿ ಚಿಕಿತ್ಸಾ ಸೌಲಭ್ಯವನ್ನು ಹಿಂಬರಿಸಿಕೊಳ್ಳಲು ಅರ್ಹರಾಗಿರುತ್ತಾರೆ.
18. KASS ಅಡಿಯಲ್ಲಿ ಲಸಿಕೆಗಳ ಮಾರ್ಗಸೂಚಿಗಳು ಯಾವುವು?
ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಆವರಿಸಿರುವ ಲಸಿಕೆಗಳು ಹಾಗೂ KASS ನಡಿಯಲ್ಲಿ ನಿರ್ಧಿಷ್ಟ ಪಡಿಸಿದ ಲಸಿಕೆಗಳಿಗೆ ಮಾತ್ರ ಅರ್ಹರಿರುತ್ತಾರೆ.
19. KASS ಫಲಾನುಭವಿಗಳು KASS ನಿಂದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಎಷ್ಟು ಬಾರಿ ತಜ್ಞರನ್ನು ಸಂಪರ್ಕಿಸಬಹುದು?
ಕೆ.ಎ.ಎಸ್.ಎಸ್ ಫಲಾನುಭವಿಯು ಒಂದೇ ನೋಂದಾಯಿತ ಆಸ್ಪತ್ರೆಗೆ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ನೀಡಬಹುದು. ಪ್ರತಿ ಭೇಟಿಯ ಸಮಯದಲ್ಲಿ ಫಲಾನುಭವಿಯು ಒಂದೇ ಆಸ್ಪತ್ರೆಯಲ್ಲಿ ಮೂರು ವಿಭಿನ್ನ ತಜ್ಞರನ್ನು ಸಂಪರ್ಕಿಸಬಹುದು.
20. KASS ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ತೆಗೆದುಕೊಂಡ ಚಿಕಿತ್ಸೆಯನ್ನು ಹಿಂಬರಿಸಿಕೊಳ್ಳಬಹುದೇ? ಹಾಗಿದ್ದರೆ ಕಾರ್ಯವಿಧಾನ ಏನು?
ಖಾಸಗಿ ನೋಂದಾವಣೆ ಮಾಡದ ಆಸ್ಪತ್ರೆಗಳಿಂದ ಸರ್ಕಾರದ ಆದೇಶದ ಪ್ರಕಾರ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಚಿಕಿತ್ಸೆಯನ್ನು KASS ದರಗಳಲ್ಲಿ ಹಿಂಬರಿಸಿಕೊಳ್ಳಲು KASS ಪರಿಗಣಿಸುತ್ತದೆ. ಹಿಂಬರಿಸಿಕೊಳ್ಳುವಿಕೆಯನ್ನು KASS ಪ್ಯಾಕೇಜ್ ದರ ಅಥವಾ ನಿಜವಾದ ವೆಚ್ಚದಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆಯಾ ಇಲಾಖಾ ಮುಖ್ಯಸ್ಥರಿಂದ ಹಿಂಬರಿಸಿಕೊಳ್ಳುವಿಕೆಗೆ ಅರ್ಹರಿರುತ್ತಾರೆ.
21. ಅನುಮೋದಿತ KASS ದರಗಳಿಗಿಂತ ಹೆಚ್ಚಿನ ಮರುಪಾವತಿಯನ್ನು ಪರಿಗಣಿಸಲು ಮಾರ್ಗಸೂಚಿಗಳು ಯಾವುವು?
ವ್ಯಾಖ್ಯಾನಿಸಲಾದ ಮಾನದಂಡಗಳ ಅಡಿಯಲ್ಲಿ ಬರುವ ಮರುಪಾವತಿಯ ವಿನಂತಿಗಳನ್ನು ವೈದ್ಯಕೀಯ ತಜ್ಞರ ಸಮಿತಿಯು ಪರಿಶೀಲಿಸುತ್ತದೆ.
22. ನೋಂದಾಯಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಎಲ್ಲಿ ದೂರು ನೀಡಬೇಕು?
ಫಲಾನುಭವಿಯು ನೋಂದಾಯಿತ ಆಸ್ಪತ್ರೆಗಳ ವೈದ್ಯಕೀಯ ನಿರ್ಲಕ್ಷದ ಎಲ್ಲಾ ಪುರಾವಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಕುಂದುಕೊರತೆಯ ಅಧಿಕಾರಿಗಳಿಗೆ ಅಥವಾ ಸ್ಟೇಟ್ ಮೆಡಿಕಲ್ ಕೌನ್ಸಿಲ್/ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸಂಪರ್ಕಿಸಬಹುದು.
23 . ನೌಕರನು ಪ್ರವಾಸ ನಿಮಿತ್ತ ಹೊರ ರಾಜ್ಯದಲ್ಲಿ ಪಡೆಯುವ ಸಂಧರ್ಭದಲ್ಲಿ ನೊಂದಾಯಿತವಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಹಿಂಬರಿಸಿಕೊಳ್ಳುವಿಕೆ ಪಡೆಯಲು ಅರ್ಹತೆ ಇದೆಯೇ?
ವೈದ್ಯಕೀಯ ತುರ್ತು ಪರಿಸ್ಥಿತಿಯ ಅಡಿಯಲ್ಲಿ ನೊಂದಾಯಿತವಲ್ಲದ ಖಾಸಗಿ ಆಸ್ಪತ್ರೆಯಲ್ಲಿ ತೆಗೆದುಕೊಂಡ ಚಿಕಿತ್ಸೆಗೆ ಹಿಂಬರಿಸಿಕೊಳ್ಳುವಿಕೆಯನ್ನು ತುರ್ತು ಪರಿಸ್ಥಿತಿಯ ವ್ಯಾಖ್ಯಾನದ ಮೇಲೆ ಸರ್ಕಾರದ ಆದೇಶದ ಪ್ರಕಾರ KASS ದರಗಳ ಪ್ರಕಾರ ಪರಿಗಣಿಸಲಾಗುತ್ತದೆ. ಸದರಿ ಹಿಂಬರಿಸಿಕೊಳ್ಳುವಿಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಂದ ನಿಯಮಾನುಸಾರ ಪಡೆಯಲು ಅರ್ಹರಿರುತ್ತಾರೆ.
24. IVF ಗಾಗಿ ಮಾರ್ಗಸೂಚಿಗಳು ಯಾವುವು?
IVF ಚಿಕಿತ್ಸೆಯನ್ನು ಜಿಲ್ಲಾ ಸರ್ಕಾರಿ ಸ್ತ್ರೀ ರೋಗ ತಜ್ಞರಿಂದ (ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ / ಜಿಲ್ಲಾ ಆಸ್ಪತ್ರೆ) ಅವರ ಶಿಫಾರಸ್ಸಿನ್ವಯ KASS ನಡಿಯಲ್ಲಿ IVF ಚಿಕಿತ್ಸೆಗೆ ಅನುಮತಿಸಲಾಗುವುದು.
25. ಆಂಬ್ಯುಲೆನ್ಸ್ ಶುಲ್ಕಗಳನ್ನು ಹಿಂಬರಿಸಿಕೊಳ್ಳಬಹುದೇ?
ಹೌದು. ಆಂಬ್ಯುಲೆನ್ಸ್ ಶುಲ್ಕಗಳು ನಗರದೊಳಗೆ ಹಿಂಬರಿಸಿಕೊಳ್ಳಲ್ಪಡುತ್ತವೆ, ವೈದ್ಯರಿಂದ ಪ್ರಮಾಣಪತ್ರವಿದ್ದರೆ, ಯಾವುದೇ ಇತರ ವಿಧಾನದ ಮೂಲಕ ಸಾಗಿಸುವಿಕೆಯು ರೋಗಿಯ ಜೀವಕ್ಕೆ ಖಂಡಿತವಾಗಿಯೂ ಅಪಾಯವನ್ನುಂಟು ಮಾಡುತ್ತದೆ ಅಥವಾ ಅವನ/ಅವಳ ಸ್ಥಿತಿಯನ್ನು ತೀವ್ರವಾಗಿ ಉಲ್ಬಣಗೊಳಿಸುತ್ತದೆ.
26. ನನ್ನ ಚಿಕಿತ್ಸೆಗೆ ಅನೇಕ ಸಿಟ್ಟಿಂಗ್ಗಳು/ಸೈಕಲ್ಗಳ ಅಗತ್ಯವಿದ್ದಲ್ಲಿ, ಪ್ರತಿ ಸೈಕಲ್ಗೆ/ಅದೇ ಚಿಕಿತ್ಸೆಯ ಕುಳಿತುಕೊಳ್ಳುವಿಕೆಗೆ ಪ್ರತ್ಯೇಕ ಪ್ರಿ-ಆಥ್ ಬೇಕೇ?
ಹೌದು, ಮಾನ್ಯತೆಯ ಅವಧಿಯು ಸಕ್ರಿಯವಾಗಿದ್ದರೆ.
27. ಫಲಾನುಭವಿಯು ದೀರ್ಘಕಾಲದ ಖಾಯಿಲೆಗಳಿಗೆ ಔಷದೋಪಚಾರ ಪಡೆಯುತ್ತಿದ್ದಲ್ಲಿ ನಗದು ರಹಿತವಾಗಿ ಔಷದ ಪಡೆಯಲು KASS ಯೋಜನೆಯಲ್ಲಿ ಅವಕಾಶವಿದೆಯೇ?
KASS ಯೋಜನೆಯಲ್ಲಿ ಹೊರರೋಗಿಯ ಚಿಕಿತ್ಸೆಗೆ ಭರಿಸುವ ಔಷದ ನಗದು ರಹಿತವಾಗಿರುವುದಿಲ್ಲ. ಔಷದೋಪಚಾರಕ್ಕೆ ಸರ್ಕಾರಿ ನೌಕರನು ಭರಿಸಿದ ವೆಚ್ಚವನ್ನು ಪ್ರಸ್ತುತ ಅನುಸರಿಸಲಾಗುತ್ತಿರುವ ಕ್ರಮದಲ್ಲಿ ನಿಯಂತ್ರಾಣಾಧಿಕಾರಿಗಳು ಸರ್ಕಾರಿ ನೌಕರರಿಗೆ ಹಿಂಬರಿಸಿಕೊಳ್ಳಬಹುದಾಗಿದೆ.
28. ಫಲಾನುಭವಿಯಾಗಿ ನೋಂದಾಯಿಸಲ್ಪಡಲು ಯಾವ ಕ್ರಮ ವಹಿಸಬೇಕು?
ಫಲಾನುಭವಿಯು ಖಡ್ಡಾಯವಾಗಿ HRMS ತಂತ್ರಾಂಶದಲ್ಲಿ ನೋಂದಾಯಿಸಿ, ಬಟವಾಡೆ ಅಧಿಕಾರಿಗಳು ಅನುಮೋದಿಸಬೇಕಾಗಿರುತ್ತದೆ. ನೊಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಖಡ್ಡಾಯವಾಗಿ unique ID ಯುಳ್ಳ DDO E-Sign ಹೊಂದಿರುವ ಪ್ರತಿಯನ್ನು ಪ್ರಸ್ತುತಪಡಿಸಬೇಕಾಗಿರುತ್ತದೆ.
29. ತುರ್ತು ಸಂಧರ್ಭದಲ್ಲಿ ಯಾವುದೇ ದಾಖಲಾತಿ ಇಲ್ಲದಿದ್ದಲ್ಲಿ ಯಾವ ಕ್ರಮ ವಹಿಸಬೇಕು?
ಸರ್ಕಾರದ ಆದೇಶದ ಪ್ರಕಾರ ತುರ್ತು ಪ್ರಕರಣಗಳಿದ್ದಲ್ಲಿ ಚಿಕಿತ್ಸೆಯನ್ನು ಯಾವುದೇ ದಾಖಲಾತಿ ಇಲ್ಲದೆ ಪಡೆಯಬಹುದಾಗಿದೆ ಆದರೆ 24 ಗಂಟೆಗಳೊಳಗೆ ದಾಖಲಾತಿಗಳನ್ನು ಆಸ್ಪತ್ರೆಗೆ ಪ್ರಸ್ತುತ ಪಡಿಸಬೇಕಾಗಿರುತ್ತದೆ.
ಆಯ್ಕೆ 1:ಫಲಾನುಭವಿಗಳು ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೋಂದಾಯಿಸಿಕೊಳ್ಳಲು ಲಿಖಿತ ಮನವಿಯನ್ನು ಸಲ್ಲಿಸುವ ಬಗ್ಗೆ.
ಫಲಾನುಭವಿಗಳು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್ಎಂಆರ್ 2020 ಭಾಗ 5 ದಿ: 09.03.2023 ರ ಅನುಬಂಧ ೧ ರಲ್ಲಿ ಸೂಚಿಸಿರುವ ಫಾರಂ ‘ಎ’ ರಲ್ಲಿ ಲಭ್ಯವಿರುವ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿ ದ್ವಿಪ್ರತಿಯಲ್ಲಿ ತನ್ನ ಕಛೇರಿಯ ಮುಖ್ಯಸ್ಥರ (ನೌಕರನ ಸೇವಾ ವಹಿಯನ್ನು ನಿರ್ವಹಿಸುವ ಕಛೇರಿ) / ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ಡಿಡಿಒ ಗೆ ಸಲ್ಲಿಸತಕ್ಕದ್ದು ಹಾಗೂ ಫಾರಂ ಎ ಜೊತೆಗೆ ಕೆಳಕಂಡ ಲಗತ್ತುಗಳನ್ನು ಸಲ್ಲಿಸತಕ್ಕದ್ದು. (ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ನಿಗಧಿಪಡಿಸಲಾದ ಫಾರಂ ಎ ಡೌನ್ ಲೋಡ ನಲ್ಲಿ ಲಭ್ಯವಿದೆ)
1. ಸರ್ಕಾರಿ ನೌಕರನ ಹಾಗೂ ಕುಟುಂಬದ ಅರ್ಹ ಸದಸ್ಯರ ಮುಖದ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, 50 ಕೆ.ಬಿ ಒಳಗಿರುವ (ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ) ಭಾವಚಿತ್ರದ ಮೇಲೆ ಸರ್ಕಾರಿ ನೌಕರರ ಸಹಿ ಮತ್ತು ದಿನಾಂಕವನ್ನು ನಮೂದಿಸತಕ್ಕದ್ದು ಮತ್ತು ಪ್ರತಿ 5 ವರ್ಷಕ್ಕೊಮ್ಮೆ ಹೊಸ ಭಾವಚಿತ್ರವನ್ನು ಒದಗಿಸತಕ್ಕದ್ದು.
2. ಜನ್ಮ ದಿನಾಂಕದ ದಾಖಲೆಗಳು (ಅವಲಂಬಿತ ಮಕ್ಕಳು)
3. ಆಧಾರ್ ಕಾರ್ಡ್ (ಪ್ರತಿಯೊಬ್ಬ ಫಲಾನುಭವಿ)
4. ವೇತನ ಚೀಟಿ (ಸರ್ಕಾರಿ ನೌಕರನ)
5. ಕಾನೂನು ದಾಖಲೆಗಳು (ದತ್ತು, ವಿವಾಹ, ಇತ್ಯಾದಿ ಸಂದರ್ಭಗಳಲ್ಲಿ)
6. ಸಂಬಂಧಪಟ್ಟ ಫಾರಂ ಎ(1), ಫಾರಂ ಎ(2), ಫಾರಂ ಎ(3) ನಲ್ಲಿ ಇರುವ ಸ್ವಯಂ ಘೋಷಣಾ ಪತ್ರ
ಆಯ್ಕೆ 2:ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೋಂದಾಯಿಸಿಕೊಳ್ಳಲು ಮೊಬೈಲ್ ಮೂಲಕ ಮನವಿಯನ್ನು ಸಲ್ಲಿಸುವ ಬಗ್ಗೆ.
ಫಲಾನುಭವಿಗಳು ជ https://hrms.karnataka.gov.in ಸೈಟ್ನಲ್ಲಿ ಲಾಗಿನ್ ಆಗಿ, Download KASS Mobile App ಲಿಂಕನ್ನು ಸೆಲೆಕ್ಟ್ ಮಾಡಿ ಅಪ್ಲಿಕೇಷನ್ನನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.
ಹೊಸ ಬಳಕೆದಾರರು : ಮೊದಲು ಆಪ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ಪಾಸ್ವರ್ಡನ್ನು ನೊಂದಾಯಿಸಿಕೊಳ್ಳಬೇಕು. ಹೊಸ ಪಾಸ್ವರ್ಡ್ ಬಳಸಿಕೊಂಡು ಪುನಃ ಲಾಗಿನ್ ಆಗಬೇಕು. ನಂತರ ಅವಲಂಬಿತ ಸದಸ್ಯರ ವಿವರಗಳನ್ನು ತುಂಬತಕ್ಕದ್ದು. ಅವಶ್ಯಕತೆ ಇದ್ದಲ್ಲಿ ಅವಲಂಬಿತರ ವಿವರಗಳನ್ನು ತಿನ್ನಬಹುದು ಮತ್ತು ಪಟ್ಟಿಗೆ ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಯಬಹುದು. ನಂತರ ಸರ್ಕಾರಿ ನೌಕರನ ಸ್ವಯಂ ಘೋಷಣಾ ಪತ್ರವನ್ನು Mobile Application ನಲ್ಲಿ ಅಪ್ ಲೋಡ್ ಮಾಡತಕ್ಕದು ಹಾಗೂ ಅನುಬಂಧ 1 ರಲ್ಲಿ ವಿವರಗಳನ್ನು ಭರ್ತಿ ಮಾಡಿ, ದ್ವಿಪ್ರತಿಯಲ್ಲಿ ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ತಮ್ಮ ಡಿಡಿಓಗಳಿಗೆ ಸಲ್ಲಿಸತಕ್ಕದ್ದು.