ನವದೆಹಲಿ: ನೇಪಾಳದ ಗೋಕರ್ಣೇಶ್ವರ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6ರಿಂದ 7ರಷ್ಟು ದಾಖಲಾಗಿದೆ.
ನೇಪಾಳದಲ್ಲಿನ ಭೂಕಂಪದಿಂದ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ದೆಹಲಿ, ಎನ್.ಸಿ.ಆರ್. ಪ್ರದೇಶ, ಬಿಹಾರ, ಮತ್ತು ಉತ್ತರ ಭಾರತದ ಹಲವು ಕಡೆಗಳಲ್ಲಿ ಕಂಪನದ ಅನುಭವವಾಗಿದ್ದು, ಆತಂಕಗೊಂಡ ಜನ ಮನೆಯಿಂದ ಹೊರಗೆ ಬಂದಿದ್ದಾರೆ.
ಇಂದು 06:35:16 IST ಕ್ಕೆ ನೇಪಾಳದ ಲೋಬುಚೆಯ ಈಶಾನ್ಯಕ್ಕೆ 93 ಕಿಮೀ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ನೇಪಾಳ, ಬಾಂಗ್ಲಾದೇಶ, ಭಾರತ, ಭೂತಾನ್ ಮತ್ತು ಚೀನಾಗಳಲ್ಲಿ ಕಂಪನದ ಪರಿಣಾಮ ಉಂಟಾಗಿದೆ ಎಂದು ಹೇಳಲಾಗಿದೆ.
An earthquake with a magnitude of 7.1 on the Richter Scale hit 93 km North East of Lobuche, Nepal at 06:35:16 IST today: USGS Earthquakes pic.twitter.com/CY3KtWAWO4
— ANI (@ANI) January 7, 2025