ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್, ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ತಮ್ಮ ಫಾರಂ ಹೌಸ್ ನಲ್ಲಿ ಎರಡು ವಾರ ವಿಶ್ರಾಂತಿ ಪಡೆದ ಅವರು ಭಾನುವಾರ ಬೆಂಗಳೂರಿಗೆ ಮರಳಿದ್ದಾರೆ. ಮೈಸೂರಿನಲ್ಲಿರುವ ತಾಯಿ ಆರೋಗ್ಯ ವಿಚಾರಿಸಲು ಮತ್ತು ವೈದ್ಯರ ಸಲಹೆ ಪಡೆಯಲು ಹಾಗೂ ಫಾರಂ ಹೌಸ್ ನಲ್ಲಿರುವ ಪ್ರಾಣಿಗಳನ್ನು ನೋಡಲು ಮೈಸೂರಿಗೆ ಹೋಗಲು ಕೋರ್ಟ್ ನಿಂದ ಅನುಮತಿ ಕೋರಿದ್ದರು. ಭಾನುವಾರ ಅವಧಿ ಮುಕ್ತಾಯವಾಗಿದೆ. ಹೀಗಾಗಿ ದರ್ಶನ್ ಬೆಂಗಳೂರಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.