ವಿರಾಟ್ ಬಿಲ್ವಾ ನಿರ್ದೇಶನದ ‘ಲವ್ maಟ್ರು’ ಚಿತ್ರದ ‘ಯೇನೋ ಗೊತಿಲ್ಲಾ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಈ ಹಾಡಿಗೆ ಅನುರಾಧ ಭಟ್ ಧ್ವನಿಯಾಗಿದ್ದು, ಅಶೋಕ್ ಮದ್ದೂರು ಹಾಗೂ ಚೇತನ್ ಅನಿಕೇತ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಇಂಕ್ ಸಿನಿಮಾಸ್, ಸಿಲ್ವರ್ಹೈಥಮ್ ಪ್ರೊಡಕ್ಷನ್ & ಬಿಆರ್ ಸಿನಿಮಾಸ್ ಬ್ಯಾನರ್ ನಲ್ಲಿ ಉಮಾ ನಾಗರಾಜ್, ವಂದನಾ ಪ್ರಿಯಾ ವಿ, ಪ್ರಭು ಕುಮಾರ್ ವಿ ನಿರ್ಮಾಣ ಮಾಡಿದ್ದು, ಅಚ್ಯುತ್ ಕುಮಾರ್ ಸೇರಿದಂತೆ ಸುಮನ್ ರಂಗನಾಥ್, ಅನಿತಾ ಭಟ್, ಸೋನಲ್ ಮೊಂಟಿರೋ, ಸುಶ್ಮಿತಾ ಗೋಪಿನಾಥ್, ವಿರಾಟ ಬಿಲ್ವಾ ತೆರೆ ಹಂಚಿಕೊಂಡಿದ್ದಾರೆ. ಪರಮೇಶ್ ಸಿಎಂ ಮತ್ತು ಆರ್ ದೇವೇಂದ್ರ ನಾಯ್ಡು ಛಾಯಾಗ್ರಹಣ ಹಾಗೂ ಸುರೇಶ್ urs ಸಂಕಲನವಿದೆ.