ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
> ಬಿಬಿಎಂಪಿ ಇ-ಖಾತೆಯು ಸಂಪರ್ಕರಹಿತ, ಫೇಸ್ಲೆಸ್, ಆನ್ಲೈನ್ ವ್ಯವಸ್ಥೆಯಾಗಿದೆ.
ನೀವು ಆನ್ಲೈನ್ನಲ್ಲಿ ಮಾಹಿತಿಗಳನ್ನು ಸಲ್ಲಿಸಿ, ಸ್ವಲ್ಪ ಕಾಯಿರಿ ಹಾಗೂ ನಿಮ್ಮಅಂತಿಮ ಇ-ಖಾತೆಯು ಖುದ್ದಾಗಿ ಜಾರಿಯಾಗುತ್ತದೆ.
> 23 ಲಕ್ಷ ಕರಡು ಇ-ಖಾತೆಗಳು ಆನ್ಲೈನ್ನಲ್ಲಿದೆ.
> 13 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ಮಾಲೀಕರು ಈಗಾಗಲೇ ಕರಡು ಇ-ಖಾತೆಯನ್ನು ಡೌನ್ಲೋಡ್ ಮಾಡಿಕೊಂಡಿರುತ್ತಾರೆ.
> ಈ ಕೆಳಗಿನ ಮಾಹಿತಿಗಳನ್ನು ಆನ್ಲೈನ್ನಲ್ಲಿ ನಮೂದಿಸಿ ಮತ್ತು ನಿಮ್ಮ ಅಂತಿಮ ಇ-ಖಾತೆಯನ್ನು ಮುದ್ರಿಸಿಕೊಳ್ಳಿ.
• ಆಧಾರ್
• ಸ್ವತ್ತಿನ ತೆರಿಗೆ ಐಡಿ
• ಕ್ರಯ / ನೋಂದಾಯಿತ ಪತ್ರ
• ಬೆಸ್ಕಾಂ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ… pic.twitter.com/yqaDHZpili
— DIPR Karnataka (@KarnatakaVarthe) December 26, 2024