ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಚುಚ್ಚುಮದ್ದು ಹಾಕಿಸಿದ್ದ ಎರಡೂವರೆ ತಿಂಗಳ ಗಂಡು ಮಗು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದೆ. ಮಗು ಸಾವಿಗೆ ಚುಚ್ಚುಮದ್ದು ನೀಡಿದ್ದೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸಿಂಗೋನಹಳ್ಳಿ ಗ್ರಾಮದ ಚೈತ್ರ ಮತ್ತು ಮುರಳಿ ದಂಪತಿಯ ಎರಡೂವರೆ ತಿಂಗಳ ಗಂಡು ಮಗು ದಕ್ಷಿತ್ ಗೆ ಗುರುವಾರ ಮಧ್ಯಾಹ್ನ ಲಸಿಕೆ ಹಾಕಿಸಲಾಗಿತ್ತು. ಭಕ್ತರಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿದ್ದು, ರಾತ್ರಿ ಮಗುವಿಗೆ ಜ್ವರ ಬಂದಿದೆ. ವಿಪರೀತ ನೋವಿನಿಂದ ನರಳಿ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.