ರಾಯಪುರ: ಛತ್ತೀಸ್ ಗಢದ ಗರಿಯಾಬಂದ್ ಜಿಲ್ಲೆಯ ನಕ್ಸಲ್ ಪೀಡಿತ ಸೊರ್ನಮಲ್ ಅರಣ್ಯದಲ್ಲಿ ಭದ್ರತಾ ಪಡೆಗಳು ಶುಕ್ರವಾರ ಮೂವರು ನಕ್ಸಲೀಯರನ್ನು ಹತ್ಯೆಗೈದಿವೆ.
ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ತಂಡವು ನಕ್ಸಲೀಯರನ್ನು ಎಲ್ಲಾ ಕಡೆಯಿಂದ ಸುತ್ತುವರಿದಿತ್ತು. ವರದಿಯ ಪ್ರಕಾರ, ಛತ್ತೀಸ್‌ಗಢ ಮತ್ತು ಒಡಿಶಾದ ಸುಮಾರು 300 ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ಜಿತೇಂದ್ರ ಚಂದ್ರಕರ್ ತಿಳಿಸಿದ್ದಾರೆ.
ಯೋಧರು ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶೋಧದ ವೇಳೆ ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ. ಸದ್ಯ ಯೋಧರ ತಂಡ ಸ್ಥಳದಲ್ಲಿದೆ. ಹತ್ಯೆಗೀಡಾದ ನಕ್ಸಲೀಯರ ಗುರುತು ಇನ್ನೂ ಪತ್ತೆಯಾಗಿಲ್ಲ. ನಕ್ಸಲೀಯರ ಶವಗಳನ್ನು ಕೇಂದ್ರ ಕಚೇರಿಗೆ ತಂದ ನಂತರ ಗುರುತಿಸಲಾಗುವುದು.
Chhattisgarh | Three naxalists have been gunned down in an encounter with security forces in naxal-hit Gariaband district. The encounter is underway and further details are awaited: Superintendent of Police (ASP) Jitendra Chandrakar
— ANI (@ANI) January 3, 2025