ಹೊಸ ವರ್ಷದ ಹೊಸ್ತಿಲಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಿರುವ ಸುದ್ದಿ ಬೆನ್ನಲ್ಲೇ ತರಕಾರಿ ಬೆಲೆ ಧಿಡೀರ್ ಅಂತ ಏರಿಕೆಯಾಗುತ್ತಿದೆ. ಮಾರ್ಕೆಟ್ ನಲ್ಲಿ ಯಾವ ತರಕಾರಿ ತೆಗೆದುಕೊಂಡರೂ ಕೆಜಿಗೆ 80-100 ರೂ ಇದೆ.
ತರಕಾರಿ ರೇಟ್ ಹೆಚ್ಚಳ ಆಗಿದ್ದು, ಬೀನ್ಸ್ ಕೆಜಿಗೆ 80 ರಿಂದ 100, ಬೆಂಡೆಕಾಯಿ ಕೆಜಿಗೆ 60 ರಿಂದ 90 ಕ್ಕೆ ಏರಿಕೆಯಾಗಿದೆ. ಅಲಸಂಡೆ 80 ರಿಂದ 110 ಕ್ಕೆ ಏರಿಕೆಯಾಗಿದೆ. ಕ್ಯಾರೆಟ್ ಹಾಗೂ ಹೀರೇಕಾಯಿ 80 ರೂ ಆಗಿದೆ.ಹಣ್ಣು ಹಂಪಲುಗಳ ಬೆಲೆ ಕೂಡ ಏರಿಕೆಯಾಗಿದ್ದು, ದಾಳಿಂಬೆ ಕೆಜಿಗೆ 220 ಹಾಗೂ ಸೇಬು 180 ಕ್ಕೇರಿದೆ. ಹಾಗೂ ಪಪ್ಪಾಯಿ ಹಣ್ಣಿನ ಬೆಲೆ ಕೆಜಿಗೆ 50 ಕ್ಕೇರಿದೆ..
ಹೀಗೆ ತರಕಾರಿ-ಹಣ್ಣು ರೇಟ್ ಡಬಲ್ ಆದ್ರೆ ಜನಸಾಮಾನ್ಯರು ಬದುಕುವುದು ಹೇಗೆ..? ಎಂಬ ಚಿಂತೆ ಜನರನ್ನು ಕಾಡುತ್ತಿದೆ.