ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದ ವೇರ್ ಹೌಸ್ ವಾಣಿಜ್ಯ ಕಟ್ಟಡದ ಮೇಲ್ಛಾವಣಿಗೆ ಬಡಿದು ವಿಮಾನ ಪತನವಾಗಿದೆ. ವಿಮಾನ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ.
ಗುರುವಾರ ದಕ್ಷಿಣ ಕ್ಯಾಲಿಫೋರ್ನಿಯಾದ ವಾಣಿಜ್ಯ ಕಟ್ಟಡದ ಮೇಲ್ಛಾವಣಿಯ ಮೂಲಕ ಸಣ್ಣ ವಿಮಾನವೊಂದು ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೆಂಜ್ ಕೌಂಟಿ ನಗರದ ಫುಲ್ಲರ್ಟನ್ನಲ್ಲಿ ಅಪಘಾತದ ಬಗ್ಗೆ ಪೊಲೀಸರು ವರದಿಯನ್ನು ಪಡೆದರು ಎಂದು ಫುಲ್ಲರ್ಟನ್ ಪೊಲೀಸ್ ವಕ್ತಾರ ಕ್ರಿಸ್ಟಿ ವೆಲ್ಸ್ ಹೇಳಿದ್ದಾರೆ.