ಬೆಂಗಳೂರು: ದೃಷ್ಟಿ ದೋಷವುಳ್ಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಡಿಯೋ ವ್ಯವಸ್ಥೆ ಕಲ್ಪಿಸುವಂತೆ ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
ದೃಷ್ಟಿ ದೋಷ ಇರುವವರಿಗೆ ಪ್ರಯಾಣದ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಬಸ್ ಸಂಚಾರದ ವಿವರಗಳ ಧ್ವನಿವರ್ಧಕ ಪ್ರಕಟಣೆಯ ಆಡಿಯೋ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಈ ಸಂಬಂಧ ದೃಷ್ಟಿ ದೋಷ ಹೊಂದಿರುವ ಹೈಕೋರ್ಟ್ ವಕೀಲ ಎನ್. ಶ್ರೇಯಸ್ ಮತ್ತು ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃತಿಕಾ ಅವರು ಸಲ್ಲಿಸಿದ್ದ ಪಿಎಎಲ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಆಂಜಾಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠದಿಂದ ಆದೇಶ ನೀಡಲಾಗಿದೆ.