ಬೆಂಗಳೂರು: ಹೊಸ ವರ್ಷ ಆಚರಣೆಯ ಸಂಭ್ರಮದ ಹೊತ್ತಲ್ಲೇ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಗೂಸಾ ನೀಡಲಾಗಿದೆ.
ಬೆಂಗಳೂರಿನ ಕೋರಮಂಗಲದ ಹೆಚ್.ಡಿ.ಎಫ್.ಸಿ. ಜಂಕ್ಷನ್ ಬಳಿ ಘಟನೆ ನಡೆದಿದ್ದು, ವ್ಯಕ್ತಿಯನ್ನು ಥಳಿಸಲಾಗಿದೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಅಟ್ಟಾಡಿಸಿ ಜನ ಗೂಸಾ ನೀಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಯಾವುದೇ ಆಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದ್ದು, ಕ್ಯಾಮರಾಗಳ ಮೂಲಕವೂ ನಿಗಾ ವಹಿಸಲಾಗಿದೆ. ಹೀಗಿರುವಾಗಲೇ ಕೋರಮಂಗಲದಲ್ಲಿ ಕಾಮುಕನೊಬ್ಬ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಟ್ಟಾಡಿಸಿ ಧರ್ಮದೇಟು ನೀಡಿದ್ದಾರೆ.