ಮೈಸೂರು ವಿಭಾಗದ ರೈಲುಗಳ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 2025ರ ಜನವರಿ 1 ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆ ಮಾಡುವ ಮುನ್ನ ಈ ಬದಲಾವಣೆಗಳನ್ನು ಗಮನಿಸಬೇಕು. ಈ ಬದಲಾವಣೆಗಳಿಂದ ರೈಲು ಸಂಚಾರದ ಸುಗಮತೆ ಮತ್ತು ಸಮಯ ಪಾಲನೆ ಸುಧಾರಿಸಲಾಗುವುದು.
ಬದಲಾದ ಪ್ರಮುಖ ರೈಲುಗಳ ವಿವರ ಹೀಗಿವೆ. ಟ್ರೈನ್ ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್(ಎಸ್.ಕೆ ಎಕ್ಸ್ಪ್ರೆಸ್):ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗರ್ಮನ ಸಮಯ: 17:08/17:10, ಹಳೆಯ ಸಮಯ: 17:50/17:52 ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ.
ಟ್ರೈನ್ ಸಂಖ್ಯೆ 20656 ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗಮಣ ಸಮಯ: 13:20/13:22, ಹಳೆಯ ಸಮಯ: 13:45/13:47 ಈ ಬದಲಾವಣೆ ಜನವರಿ 4, 2025 ರಿಂದ ಜಾರಿಗೆ ಬರುತ್ತದೆ.
ಟ್ರೈನ್ ಸಂಖ್ಯೆ 06243/56519 ಬೆಂಗಳೂರು-ಹೋಷಪೇಟೆ ಪ್ಯಾಸೆಂಜರ್: ಚಿಕ್ಕಜಾಜೂರು ನಿಲ್ದಾಣ: ಹೊಸ ಸಮಯ: 10:05/10:10, ಹಳೆಯ ಸಮಯ: 10:07/10:10 – ಜನವರಿ 1, 2025 ರಿಂದ ಈ ಬದಲಾವಣೆ ಜಾರಿಯಲ್ಲಿರುತ್ತದೆ.
ಟ್ರೈನ್ ಸಂಖ್ಯೆ 07377 ಬಿಜಾಪುರ-ಮಂಗಳೂರು ಎಕ್ಸ್ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿರ್ಗಮನ ಸಮಯ: 23:43/23:45, ಹಳೆಯ ಸಮಯ: 23:55/23:57, ಚಿಕ್ಕಜಜೂರು ನಿಲ್ದಾಣ: – ಹೊಸ ಸಮಯ: 00:20/00:22, ಹಳೆಯ ಸಮಯ: 00:40/00:42,
ಟ್ರೈನ್ ಸಂಖ್ಯೆ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ಪ್ರೆಸ್ ಈ ರೈಲು ಹಲವಾರು ಮಧ್ಯದ ನಿಲ್ದಾಣಗಳಲ್ಲಿ ಬದಲಾದ ಸಮಯದೊಂದಿಗೆ ಸಂಚರಿಸುತ್ತದೆ. ಚಿತ್ರದುರ್ಗ:- ಹೊಸ ಸಮಯ: 13:40, – ಹಳೆಯ ಸಮಯ: 14:00, ಹಳಿಯೂರು, ಹೊಸ ಸಮಯ: 13:45/13:46 – ಹಳೆಯ ಸಮಯ: 14:09/14:11, ಬೆಟ್ಟದನಗನಹಳ್ಳಿ ಹಾಲ್ಟ್, ಹೊಸ ಸಮಯ: 13:52/13:53, ಹಳೆಯ ಸಮಯ: 14:15/14:16, ಅಮೃತಾಪುರ, ಹೊಸ ಸಮಯ: 13:58/13:59, – ಹಳೆಯ ಸಮಯ: 14:23/14:24, ಚಿಕ್ಕಂದವಾಡಿ ಹಾಲ್ಟ್, ಹೊಸ ಸಮಯ: 14:05/14:06, ಹಳೆಯ ಸಮಯ: 14:30/14:31, ದಾವಣಗೆರೆ: – ಹೊಸ ಸಮಯ: 15:21/15:23 – ಹಳೆಯ ಸಮಯ: 16:10/16:12,
ಟ್ರೈನ್ ಸಂಖ್ಯೆ 07339 ಹುಬ್ಬಳ್ಳಿ-ಬೆಂಗಳೂರು ಎಕ್ಸ್ಪ್ರೆಸ್, ದಾವಣಗೆರೆ ನಿಲ್ದಾಣ, ಹೊಸ ಸಮಯ: 01:10/01:12, ಹಳೆಯ ಸಮಯ: 01:33/01:35 ಈ ಬದಲಾವಣೆ ಜನವರಿ 1, 2025 ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರಿಗೆ ಸೂಚನೆ: ಈ ಬದಲಾವಣೆಗಳಿಂದ ರೈಲು ಸಂಚಾರವನ್ನು ಇನ್ನಷ್ಟು ಸಮರ್ಪಕಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ತಂದುಕೊಳ್ಳಲಾಗಿದೆ. ಹೊಸ ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಅಥವಾ ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.