ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಮಾದಕ ವಸ್ತು ಸಂಗ್ರಹಿಸಿಟ್ಟಿದ್ದ ಟ್ಯಾಟೂ ಆರ್ಟಿಸ್ಟ್ ಓರ್ವನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ರಕ್ಷಿತ್ ಆರ್.ಎಂ (30) ಬಂಧಿತ ಆರೋಪಿ. ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಚೊಕ್ಕನಹಳ್ಳಿಯ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಸಿದಿಬಿ ಪೊಲೀಸರು ಅಪಾರ್ಟ್ ಮೆಂಟ್ ನಲ್ಲಿ ಸಂಗ್ರಹಿಸಿಟ್ಟಿದ್ದ 2.50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಆರೋಪಿ ರಕ್ಷಿತ್ ಟ್ಯಾಟೂ ಆರ್ಟಿಸ್ಟ್ ಆಗಿದ್ದ. ಗೋವಾದಿಂದ ಎಲ್ ಎಸ್ ಡಿ, ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ, ಹಿಮಾಚಲಪ್ರದೇಶದಿಂದ ಚರಸ್ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಸಂಗ್ರಹಿಸಿದ್ದ.