ರಾಜೀವ್ ಹನು ಅಭಿನಯದ ಬಹುನಿರೀಕ್ಷಿತ ‘ಬೇಗೂರು ಕಾಲೋನಿ’ ಚಿತ್ರದ ‘ಮನಮೋಹಕ’ ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಶ್ರೀ ಲಕ್ಷ್ಮಿ ಬೆಲ್ಮಣ್ಣು ಧ್ವನಿಗೂಡಿಸಿದ್ದು, ಅಭಿನಂದನ್ ಕಶ್ಯಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ, ಇನ್ನುಳಿದಂತೆ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ.
ಫ್ಲೈಯಿಂಗ್ ಕಿಂಗ್ ಮಂಜು ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್ ನಲ್ಲಿ ಎಂ. ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫ್ಲೈಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಮುರಳಿ, ಬಾಲ ರಾಜವಾಡಿ ತಾರಾಂಗಣದಲ್ಲಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಾಣ, ಪ್ರಮೋದ್ ತಲ್ವಾರ್ ಸಂಕಲನವಿದೆ.