ರಾಮನಗರ: ವರ್ಕ ಫ್ರಂ ಹೋಂ ಕೆಲಸದ ಆಮಿಷವೊಡ್ಡಿ ಹಲವರಿಗೆ ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ರಾಮನಗರದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಬರೋಬ್ಬರಿ 20 ಲಕ್ಷ ಹಣ ಕಳೆದುಕೊಂಡಿದ್ದರೆ ಇನ್ನೋರ್ವವರು 16 ಲಕ್ಷ ಹಣ ಕಳೆದುಕೊಂಡಿದ್ದಾರೆ. ರಾಮನಗರದಲ್ಲಿ ಮಹಿಳೆಯೊಬ್ಬರು ವರ್ಕ್ ಫ್ರಂ ಹೋಂ ಕೆಲಸ ಎಂದು ನಂಬಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಕನಕಪುರದ ದೊಡ್ಡ ಆನಮಾನಹಳ್ಳಿಯ ಶಾಲಿನಿ ಎಂಬುವವರು 16 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಚನ್ನಪಟ್ಟಣದ ಮದಿನ ಚೌಕ್ ನಿವಾಸಿ ಶಾಹಿದಾ ಬಾನು 3 ಲಕ್ಷದ 46 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ರಾಮನಗರದ ಸೆನ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.10ರಂದು ಶಾಲಿನಿ ಅವರ ಮೊಬೈಲ್ ಗೆ ವರ್ಕ್ ಫ್ರಂ ಹೋಂ ಇದೆ ಎಂದು ಕರೆಯೊಂದು ಬಂದಿದೆ. ಕೆಲಸಕ್ಕೆ ಶಾಲಿನಿ ಒಪ್ಪಿಕೊಂಡಿದ್ದಾರೆ. ಅವರ ವಾತ್ಶಪ್ ಗೆ ಲಿಂಕ್ ಒಂದನ್ನು ಕಳುಹಿಸಿದ್ದಾರೆ. ಟೆಲಿಗ್ರಾಮ್ ಗ್ರೂಪ್ ಗೆ ಅವರ ವಾತ್ಶಪ್ ನಂಬರ್ ಆಡ್ ಮಾಡಿದ್ದಾರೆಒಂದು ರಿವ್ಯೂವ್ ಗೆ 40 ರೂ ನಂತೆ 1ರಿಂದ 6 ಟಾಸ್ಕ್, 5 ಗೂಗಲ್ ರಿ ವ್ಯೂವ್ ಹಾಗೂ 1 ಡಾಟಾ ಟಾಸ್ಕ್ ಮಾಡಿದರೆ 500 ರೂ ಹಣ ನೀಡಲಾಗುತ್ತದೆ ಒಂದು ಡಾಟಾ ಟಾಸ್ಕ್ ಗೆ 1010 ರೂ. ಸಾವಿರಕ್ಕೆ ಒತ್ಟು 1500 ರೂ ಬರುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ಆರಂಭದಲ್ಲಿ ಅವರು ಹೇಳಿದಂತೆ ಶಾಲಿನಿ 1500ರಲ್ಲಿ 500 ರೂ ಲಾಭ ಪಡೆದಿದ್ದಾರೆ. ಹೀಗೆ 12 ಟಾಸ್ಕ್ ಮಡಲು ಹೇಳಿದ್ದಾರೆ. ಬಳಿಕ 7010 ರೂ ಕಟ್ಟುವಂತೆ ಹೇಳಿದ್ದಾರೆ. ಆಗ ಯಾವುದೇ ಹಣ ವಾಪಾಸ್ ಬಂದಿಲ್ಲ.
ಹಣ ಬಂದಿಲ್ಲ ಎಂದು ಕೇಳಿದಾಗ ತಪ್ಪಾಗಿ ಹಣ ಹಾಕಿದ್ದೀರಿ ಮತ್ತೊಮ್ಮೆ ಹಾಕಿ ಎಂದಿದ್ದಾರೆ ಹೀಗೆ 28,960 ರೂ ಹಾಕಿಸಿಕೊಂಡಿದ್ದಾರೆ ತಪ್ಪಾಗಿ ಹಣ ಹಾಕಬೇಡಿ ಎಂದು ಮಾತನಾಡುತ್ತಲೇ ಶಾಲಿನಿ ಅಕೌಂಟ್ ನಿದ ವಂಚಕರು 16, 55,556 ರೂ ದೋಚಿದ್ದಾರೆ.
ಇದೇ ರೀತಿ ಚನ್ನಪಟ್ಟಣದ ಶಾಹಿದಾ ಬಾನು ಎಂಬುವವರಿಗೆ ವರ್ಕ ಫ್ರಂ ಹೋಂ ಹೆಸರಲ್ಲಿ ವಂಚಕರು 3 ಲಕ್ಷಕ್ಕೂ ಅಧಿಕ ಹಣ ಕಬಳಿಸಿದ್ದಾರೆ.