ನವದೆಹಲಿ : ಸುದ್ದಿ ಓದುವ ಭರದಲ್ಲಿ ನ್ಯೂಸ್ ಆ್ಯಂಕರ್ ಎಡವಟ್ಟು ಮಾಡಿದ್ದು, ಡಾ.ಮನಮೋಹನ್ ಸಿಂಗ್’ ಎನ್ನುವ ಬದಲು ‘ಪ್ರಧಾನಿ ಮೋದಿ’ ನಿಧನ ಎಂದು ಸುದ್ದಿ ಓದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
The desperation to be the first and the hatred for Modi have bring India Today here.
RIP @aajtak and @IndiaToday pic.twitter.com/NRKU1Q4rVH
— maithun (@Being_Humor) December 26, 2024
ಆಜ್ ತಕ್ ನ್ಯೂಸ್ ಆ್ಯಂಕರ್ ಗುರುವಾರ ಡಿ.26 ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧಿವಶರಾಗಿದ್ದಾರೆ ಎಂಬ ಸುದ್ದಿಯನ್ನು ಓದುವ ಭರದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನು ಹೇಳಿದ್ದಾರೆ.ಕೆಲ ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಸ್ತುತ ಕೇಂದ್ರ ಸರ್ಕಾರದ ಬಗ್ಗೆ ಗುಲಾಮಗಿರಿ ನಡೆಸುತ್ತಿದೆ ಎಂದು ಕೆಲವರು ಚಾನೆಲ್ ಅನ್ನು ಅಪಹಾಸ್ಯ ಮಾಡಿದರೆ, ಇತರರು “ಚಾನೆಲ್ ಏನು ಧೂಮಪಾನ ಮಾಡುತ್ತಿದೆ” ಎಂದು ತಮಾಷೆಯಾಗಿ ಆಶ್ಚರ್ಯಪಟ್ಟರು.
AajTak is on Weed Energy 🤦
#ManmohanSingh की खबर में भी मोदीकारिता. pic.twitter.com/x7m6U98DGa— Baba MaChuvera 💫 Parody of Parody (@indian_armada) December 26, 2024