ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿದೆ. ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಆಗಿದ್ದ ಈ ನಗರ ನಂತರದಲ್ಲಿ ಚೆನ್ನೈ ಎಂದಾಯಿತು.
ಇಂದಿಗೂ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಚೆನ್ನೈನಲ್ಲಿ ಪಾಶ್ಚಿಮಾತ್ಯ ಪ್ರಭಾವವೂ ಹೆಚ್ಚಿದೆ. ಗುಡಿ ಕೈಗಾರಿಕೆ, ತಂತ್ರಜ್ಞಾನ, ಸಿನಿಮಾ, ಹೀಗೆ ಹಲವು ಉದ್ಯಮಗಳ ನೆಲೆಯಾಗಿದೆ.
ಚೆನ್ನೈನಲ್ಲಿ ಪ್ರಮುಖ ತಾಣಗಳಲ್ಲಿ ಮರೀನಾ ಬೀಚ್ ಒಂದಾಗಿದೆ. ಸಮುದ್ರ ತೀರದ ಪಕ್ಕದಲ್ಲಿಯೇ ವಿಶಾಲವಾದ ರಸ್ತೆ ಇದ್ದು, ರಾತ್ರಿಯಲ್ಲಿ ಬೆಳಗುವ ವಿದ್ಯುತ್ ಬೆಳಕಿನಿಂದ ಬೀಚ್ ನ ಅಂದ ಹೆಚ್ಚಾಗುತ್ತದೆ.
ಬೆಡಗಿನ ಮರಿರೀನಾ ಬೀಚ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಎಂ.ಜಿ.ಆರ್., ಜಯಲಲಿತಾ ಅವರ ಸ್ಮಾರಕಗಳು ಇಲ್ಲಿವೆ. ತೀರದ ಮತ್ತೊಂದು ಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ, ಕಾಲೇಜ್, ಪೊಲೀಸ್ ಕಚೇರಿ ಮೊದಲಾದವುಗಳಿವೆ.
ಬೆಸೆಂಟ್ ನಗರದ ಇಲಿಯಟ್ಸ್ ಬೀಚ್ ಕೂಡ ಪ್ರಮುಖ ಪ್ರವಾಸಿ ತಾಣ. ಮರಿನಾ ಬೀಚ್ ನಂತೆಯೇ ಇಲ್ಲಿಗೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅಷ್ಟಲಕ್ಷ್ಮಿ ದೇವಾಲಯ, ವೇಲಾಂಗಣಿ ಚರ್ಚ್ ಇಲ್ಲಿವೆ.
ಇನ್ನೂ ಹಲವು ನೋಡಬಹುದಾದ ಸ್ಥಳಗಳು ಚೆನ್ನೈನಲ್ಲಿವೆ. ಅವುಗಳಲ್ಲಿ ಕಲಾಕ್ಷೇತ್ರ, ಥಿಯೊಸಾಫಿಕಲ್ ಸೊಸೈಟಿ, ನ್ಯಾಷನಲ್ ಪಾರ್ಕ್, ಮೃಗಾಲಯ ಪ್ರಮುಖವಾದವು.