ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ. ನೇರಳೆ, ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ.
ಜನವರಿ 1ರಂದು ಮುಂಜಾನೆ 2 ಗಂಟೆಗೆ ಕೊನೆಯ ರೈಲು ಎಲ್ಲಾ ಟರ್ಮಿನಲ್ ಗಳಿಂದ ಸಂಚರಿಸಲಿದೆ.
ಮುಂಜಾನೆ 2.40ಕ್ಕೆ ಮೆಜೆಸ್ಟಿಕ್ ನಿಂದ ಕೊನೆಯ ರೈಲು ಸಂಚಾರ ಇರಲಿದೆ. ಡಿಸೆಂಬರ್ 31 ರಂದು ರಾತ್ರಿ 11 ಗಂಟೆಯಿಂದ 10 ನಿಮಿಷಕ್ಕೊಂದು ರೈಲು ಸೇವೆ ಇರುತ್ತದೆ.
ಎಂಜಿ ರಸ್ತೆ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ರಾತ್ರಿ 11 ಗಂಟೆ ಬಳಿಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗುವುದು. ಟ್ರೆನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣದಿಂದ ಸೇವೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.