alex Certify ಅಬ್ಬಾ…! ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಮನಮೋಹನ್ ಸಿಂಗ್ ಪಡೆದ ಪದವಿಗಳು, ನಿರ್ವಹಿಸಿದ ಹುದ್ದೆಗಳೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಮನಮೋಹನ್ ಸಿಂಗ್ ಪಡೆದ ಪದವಿಗಳು, ನಿರ್ವಹಿಸಿದ ಹುದ್ದೆಗಳೆಷ್ಟು ಗೊತ್ತಾ…?

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932 ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮದಲ್ಲಿ ಜನಿಸಿದರು. ಅರ್ಥಶಾಸ್ತ್ರಜ್ಞರಲ್ಲದೆ, ಮನಮೋಹನ್ ಸಿಂಗ್ ಅವರು 1982-1985 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮನಮೋಹನ್ ಸಿಂಗ್ ಪಡೆದ ಪದವಿಗಳು ಮತ್ತು ಹುದ್ದೆಗಳು

ಅರ್ಥಶಾಸ್ತ್ರದಲ್ಲಿ ಬಿ.ಎ.(ಆನರ್ಸ್) ೧೯೫೨; ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ (ಆಗ ಹೋಶಿಯಾರ್ಪುರ, ಪಂಜಾಬ್), ಭಾರತ

ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ – ಸೇಂಟ್ ಜಾನ್ಸ್ ಕಾಲೇಜು(೧೯೫೭)

ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ(೧೯೫೭-೧೯೫೯)

ರೀಡರ್(೧೯೫೯ – ೧೯೬೩)

ಪ್ರೊಫೆಸರ್(೧೯೬೩-೧೯೬೫)

ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್(೧೯೬೯ – ೧೯೭೧)

ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ – ನಫೀಲ್ಡ್ ಕಾಲೇಜ್(೧೯೬೨)

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ

ಗೌರವ ಪ್ರಾಧ್ಯಾಪಕ(೧೯೬೬)

ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್(೧೯೬೬)

ಆರ್ಥಿಕ ವ್ಯವಹಾರಗಳ ಅಧಿಕಾರಿ(೧೯೬೬)

ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ(೧೯೭೧ – ೧೯೭೨)

ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ(೧೯೭೨ – ೧೯೭೬)

ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ(೧೯೭೬)

ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ(೧೯೭೬-೧೯೮೦)

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ(೧೯೭೬-೧೯೮೦)

ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ

ಕಾರ್ಯದರ್ಶಿ, ಹಣಕಾಸು ಸಚಿವಾಲಯ(ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ(೧೯೭೭ – ೧೯೮೦)

ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(೧೯೮೨-೧೯೮೫)

ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ(೧೯೮೫-೧೯೮೭)

ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ(೧೯೮೭-೧೯೯೦)

ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ(೧೯೯೦-೧೯೯೧)

ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ(೧೫ ಮಾರ್ಚ್ ೧೯೯೧ – ೨೦ ಜೂನ್ ೧೯೯೧)

ಭಾರತದ ಹಣಕಾಸು ಸಚಿವರು(೨೧ ಜೂನ್ ೧೯೯೧ – ೧೫ ಮೇ ೧೯೯೬)

ರಾಜ್ಯಸಭೆಯ ಸಂಸತ್ ಸದಸ್ಯ(೧ ಅಕ್ಟೋಬರ್ ೧೯೯೧ – ೧೪ ಜೂನ್ ೨೦೧೯)

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ(೧೯೯೮-೨೦೦೪)

ಭಾರತದ ಪ್ರಧಾನ ಮಂತ್ರಿ(೨೨ ಮೇ ೨೦೦೪ – ೨೬ ಮೇ ೨೦೧೪)

ರಾಜ್ಯಸಭೆಯ ಸಂಸತ್ ಸದಸ್ಯ(೧೯ ಆಗಸ್ಟ್ ೨೦೧೯ – ೩ ಏಪ್ರಿಲ್ ೨೦೨೪)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...