ಬೆಂಗಳೂರು: ಚಿಲ್ಲರೆ ಸಮಸ್ಯೆ ನಿವಾರಣೆಗಾಗಿ ಬಿಎಂಟಿಸಿಯಿಂದ ಆನ್ಲೈನ್ ಪೇಮೆಂಟ್ ಗಳ ಮೂಲಕ ಪ್ರಯಾಣ ದರ ಪಾವತಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
2023- 24 ರಲ್ಲಿ 59.18 ಕೋಟಿ ರೂಪಾಯಿ ಆನ್ಲೈನ್ ಮೂಲಕ ಟಿಕೆಟ್ ದರ ಪಾವತಿಸಲಾಗಿದೆ. ಇದರಿಂದಾಗಿ ಬಿಎಂಟಿಸಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಚಿಲ್ಲರೆ ಸಮಸ್ಯೆ ಗಲಾಟೆಗೆ ಕಡಿವಾಣ ಬಿದ್ದಿದೆ.
ಚಿಲ್ಲರೆ ಸಮಸ್ಯೆ ಪರಿಹಾರದ ಉದ್ದೇಶದಿಂದ ಕಳೆದ ಒಂದೂವರೆ ವರ್ಷದಿಂದ ಬಿಎಂಟಿಸಿ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ. ನಂತರ ಪ್ರಯಾಣಿಕರು ಈ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಆನ್ಲೈನ್ ಪಾವತಿ ಹೆಚ್ಚಾಗಿದ್ದು, 2023ರಲ್ಲಿ 3.48 ಕೋಟಿ ರೂ. ಇದ್ದ ಆನ್ಲೈನ್ ಪಾವತಿ ಪ್ರಮಾಣ 2024ರ ಮಾರ್ಚ್ ನಲ್ಲಿ 7.17 ಕೋಟಿ ರೂ.ಗೆ ಏರಿಕೆಯಾಗಿತ್ತು. 2023- 24 ನೇ ಸಾಲಿನಲ್ಲಿ ಆನ್ಲೈನ್ ಮೂಲಕ 59.18 ಕೋಟಿ ರೂ. ಟಿಕೆಟ್ ಮೊತ್ತ ಪಾವತಿಸಲಾಗಿದೆ.