ಇತ್ತೀಚಿಗಷ್ಟೇ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.
ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ತನ್ನ ತವರಿನಲ್ಲೇ ಮುಖಭಂಗವಾಗಿದೆ. ನಾಳೆ ಸೆಂಚುರಿಯನ್ ನಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ನಡೆಯುತ್ತಿದ್ದು, ಉಭಯ ತಂಡಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಆಫ್ರಿಕಾ ತಂಡ; ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಡೇನ್ ಪ್ಯಾಟರ್ಸನ್, ಕಾರ್ಬಿನ್ ಬಾಷ್, ಟೋನಿ ಡಿ ಜೊರ್ಜಿ, ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್
ಪಾಕಿಸ್ತಾನ ತಂಡ; ಶಾನ್ ಮಸೂದ್ (ನಾಯಕ), ಸಲ್ಮಾನ್ ಅಲಿ ಅಘಾ, ಬಾಬರ್ ಅಜಮ್, ಸೈಮ್ ಅಯೂಬ್, ಅಮೀರ್ ಜಮಾಲ್, ಮೊಹಮ್ಮದ್ ರಿಜ್ವಾನ್, ಕಮ್ರಾನ್ ಗುಲಾಮ್, ನಸೀಮ್ ಶಾ, ನೋಮನ್ ಅಲಿ, ಖುರ್ರಂ ಶಹಜಾದ್. ಸೌದ್ ಶಕೀಲ್.