ಬೆಂಗಳೂರು : ಸಮಸ್ತ ಕ್ರೈಸ್ತ ಬಾಂಧವರಿಗೆ ಇಂದು ಕ್ರಿಸ್’ಮಸ್ ಹಬ್ಬದ ಸಂಭ್ರಮ. ರಾಜ್ಯದ ಎಲ್ಲಾ ಕಡೆ ಕ್ರೈಸ್ತ ಬಾಂಧವರು ಸಂಭ್ರಮ, ಸಡಗರದಿಂದ ಹಬ್ಬ ಆಚರಿಸುತ್ತಿದ್ದಾರೆ.
ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.
”ನಾಡಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಏಸು ಕ್ರಿಸ್ತನ ಪ್ರೀತಿ, ಕರುಣೆ, ಕ್ಷಮಾ ಗುಣಗಳು ಮನುಕುಲದ ಹಾದಿಗೆ ಬೆಳಕಾಗಿ ಮುನ್ನಡೆಸಲಿ ಎಂದು ಆಶಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ X ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ನಾಡಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
ಏಸು ಕ್ರಿಸ್ತನ ಪ್ರೀತಿ, ಕರುಣೆ, ಕ್ಷಮಾ ಗುಣಗಳು ಮನುಕುಲದ ಹಾದಿಗೆ ಬೆಳಕಾಗಿ ಮುನ್ನಡೆಸಲಿ ಎಂದು ಆಶಿಸುತ್ತೇನೆ.#MerryChristmas pic.twitter.com/bTtiPLrRYb— Siddaramaiah (@siddaramaiah) December 25, 2024