ಉತ್ತರ ಕನ್ನಡ : ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ನೂರಾರುಬೀದಿ ನಾಯಿಗಳ ಮಾರಣ ಹೋಮ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಬೀದಿ ನಾಯಿಗಳಿಗೆ ವಿಷವುಣಿಸಿ ಸಾಯಿಸಿ ಹೆದ್ದಾರಿಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ಬೀದಿ ನಾಯಿಗಳನ್ನು ಹಿಡಿದು ತಂದು ಸಾಯಿಸಿ ಹೆದ್ದಾರಿಯಲ್ಲಿ ರಾಶಿ ಹಾಕಲಾಗಿದ್ದು, ಸತ್ತ ನಾಯಿಗಳ ಜೊತೆ ಖಾಯಿಲೆ ಪೀಡಿತ ಜೀವಂತ ನಾಯಿಗಳು ಕೂಡ ಪತ್ತೆಯಾಗಿದೆ. ರಸ್ತೆ ಬದಿಯಲ್ಲೇ ನಾಯಿಗಳ ಶವ ಹಾಕಲಾಗಿದ್ದು, ವಾಹನ ಸವಾರರು ಕೆಟ್ಟ ವಾಸನೆಯಿಂದ ತೊಂದರೆ ಅನುಭವಿಸಿದ್ದಾರೆ.