alex Certify ‘ಜೇನು ಕೃಷಿ’ ಮಾಡುವವರಿಗೆ ಗುಡ್ ನ್ಯೂಸ್ : ‘ಸರ್ಕಾರಿ ಬ್ರ್ಯಾಂಡ್’ ಬಳಸಿ ತುಪ್ಪ ಮಾರಾಟ ಮಾಡಲು ಅವಕಾಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೇನು ಕೃಷಿ’ ಮಾಡುವವರಿಗೆ ಗುಡ್ ನ್ಯೂಸ್ : ‘ಸರ್ಕಾರಿ ಬ್ರ್ಯಾಂಡ್’ ಬಳಸಿ ತುಪ್ಪ ಮಾರಾಟ ಮಾಡಲು ಅವಕಾಶ.!

ಬೆಂಗಳೂರು : ಗ್ರಾಹಕರಿಗೆ ಉತ್ತಮ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ್ಯಾಂಡ್ ಹೆಸರು “ಝೇಂಕಾರ”(ಕನ್ನಡದಲ್ಲಿ) ಮತ್ತು Jhenkara (Englisḩ) ಟ್ಯಾಗ್ಲೈನ್ (ಜೀವನೋಲ್ಲಾಸಕ್ಕೆ ಜೇನು-ಕನ್ನಡ), (Honey that keeps you Buzzin- English) ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ Trade Mark Registry ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದ್ದು ತೋಟಗಾರಿಕೆ ಇಲಾಖೆಯು ಬ್ರ್ಯಾಂಡ್ ನ ಮಾಲೀಕತ್ವವನ್ನು ಹೊಂದಿದೆ.

ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೊಡ್ಡಬಳ್ಳಾಪುರ-9482129648, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೇವನಹಳ್ಳಿ-9448825101, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊಸಕೋಟೆ-9880210892, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ನೆಲಮಂಗಲ-9880461607 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...