ಬೆಂಗಳೂರು : ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿ ಖದೀಮರು ಲಕ್ಷಾಂತರ ಹಣ ವಂಚಿಸಿರುವ ಘಟನೆ ನಡೆದಿದೆ.
ಘಟನೆ ಸಂಬಂಧ ವಿಜಯಪುರದ ಡಾ. ಲಕ್ಷ್ಮೀಕಾಂತ್, ಹೊಸಮನಿ, ಸಂತೋಶ್, ಶ್ರೀಧರ್ ಸೇರಿ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆನ್ ಲೈನ್ ಮೂಲಕ ತರಬೇತಿ ನೀಡಿ ನಕಲಿ ಆನ್ ಲೈನ್ ಕಾಫಿ ಕೊಟ್ಟಿದ್ದರು. ಅಲ್ಲದೇ ಕಾನ್ಪುರದಲ್ಲಿ ತರಬೇತಿ ಕೂಡ ನೀಡಿದ್ರು…ನಂತರ ನೇಮಕಾತಿ ಪತ್ರ ಹಿಡಿದುಕೊಂಡು ಕೆಲಸಕ್ಕೆ ಜಾಯಿನ್ ಆದಲು ಹೋದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಒಬ್ಬೊಬ್ಬರಿಂದ 20-25 ಲಕ್ಷ ಪಡೆದಿರುವುದು ಬಯಲಾಗಿದೆ. ಘಟನೆ ಸಂಬಂಧ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.