ತಮಿಳುನಾಡು : ತಮಿಳುನಾಡಿನಲ್ಲಿ ನಿರಂತರ ಭಾರಿ ಮಳೆಯಿಂದಾಗಿ ಚೆನ್ನೈ, ರಾಮನಾಥಪುರಂ, ದಿಂಡಿಗಲ್, ಪುದುಕೊಟ್ಟೈ, ತಿರುವರೂರು, ಕಾಂಚೀಪುರಂ, ಕಡಲೂರು ಮತ್ತು ತಂಜಾವೂರು ಸೇರಿದಂತೆ 10 ಜಿಲ್ಲೆಗಳ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದ ಮೇಲೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಮತ್ತುಸಿಡಿಲಿನೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ತಮಿಳುನಾಡಿನ ಅರಿಯಲೂರು, ತಂಜಾವೂರು, ತಿರುವರೂರು ಮತ್ತು ಪುದುಕೊಟ್ಟೈ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರು, ತಿರುಚಿರಾಪಳ್ಳಿ, ಶಿವಗಂಗಾ, ರಾಮನಾಥಪುರಂ, ಮಯಿಲಾಡುತುರೈ, ನಾಗಪಟ್ಟಿಣಂ, ಕೊಯಮತ್ತೂರು, ತಿರುಪ್ಪೂರು, ಕರೂರ್, ಥೇಣಿ, ದಿಂಡಿಗಲ್, ಮಧುರೈ, ವಿರುಧುನಗರ, ತೆಂಕಾಸಿ, ತೂತುಕುಡಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
#Chennai #Kanchipuram schools and 8 other districts declared a holiday today(12.12.2024) owing to rain pic.twitter.com/q1lAPVeWyp
— Chennai Weather-Raja Ramasamy (@chennaiweather) December 12, 2024