ಇಂತಹ ಸಾಹಸಕ್ಕೆ ಅಪ್ಪಿತಪ್ಪಿಯೂ ʼಕೈʼ ಹಾಕಿರೀ ಜೋಕೆ….! ವಿಡಿಯೋ ನೋಡಿ 07-12-2024 8:05AM IST / No Comments / Posted In: Latest News, India, Live News ಉತ್ತರ ಪ್ರದೇಶದ ಮೊರಾದಾಬಾದ್‌ನ ಮಜೋಲಾದ ಮಿಯಾನ್ ಕಾಲೋನಿ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಯುವಕರು ಕೈ ಬಗ್ಗಿಸುವ ಸ್ಪರ್ಧೆಗೆ ಮುಂದಾಗಿದ್ದು, ಇದಕ್ಕಾಗಿ 10,000 ರೂಪಾಯಿ ಬೆಟ್ ಕಟ್ಟಿದ್ದರು. ಅಂತಿಮವಾಗಿ ಭಾಗವಹಿಸಿದವರಲ್ಲಿ ಒಬ್ಬರಾದ ಕಾಶಿಫ್ ಎಂಬಾತ ತನ್ನ ಕೈ ಮುರಿದುಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಈ ಆಘಾತಕಾರಿ ಕ್ಷಣ ಸೆರೆಯಾಗಿದ್ದು, ಇಬ್ಬರು ಯುವಕರ ನಡುವಿನ ಸ್ಪರ್ಧೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಒಬ್ಬ ಸ್ಪರ್ಧಿಯ ತೋಳು ಇದ್ದಕ್ಕಿದ್ದಂತೆ ಸ್ನ್ಯಾಪ್ ಆಗಿದ್ದು, ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ. ಇಲ್ಲಿ ಅಂತಹ ಶಕ್ತಿ ಪ್ರದರ್ಶನಗಳ ಆಟ ನಡೆಯುತ್ತಿತ್ತು ಎಂದು ವರದಿಯಾಗಿದ್ದು, ಇದಕ್ಕಾಗಿ ಬೆಟ್ ಕೂಡ ಕಟ್ಟಲಾಗುತ್ತದೆ. ಅಲ್ಲಿ ಯುವಕರು ಸಾಮಾನ್ಯವಾಗಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಘಟನೆಯ ನಡೆದ ದಿನ ಕಾಶಿಫ್ ಸ್ಪರ್ಧಿಸಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ಬಳಿಕ ವೈದ್ಯಕೀಯ ವೆಚ್ಚ ಭರಿಸಲು 60,000 ರೂಪಾಯಿ ಒಪ್ಪಂದದೊಂದಿಗೆ ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದು, ಕೂಡಲೇ ಕಾಶಿಫ್ ನನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. Damn! his Hand got broken while Arm wrestling in Moradabad Up pic.twitter.com/IHiYb7UG6s — Ghar Ke Kalesh (@gharkekalesh) December 3, 2024