ಬೆಂಗಳೂರು : ಇಲಾಖಾ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಪ್ರಾಂಶುಪಾಲರುಗಳ ರಜೆ ಮಂಜೂರಾತಿಯ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಕಾಲೇಜು, ಚಿತ್ರಕಲಾ ಕಾಲೇಜು, ಶಿಕ್ಷಣ ಕಾಲೇಜು ಹಾಗೂ ಕಾನೂನು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಪ್ರಾಂಶುಪಾಲರುಗಳು ದೀರ್ಘವಧಿ ರಜೆಗಳಾದ ಗಳಿಕೆ ರಜೆ, ಅಸಾಧಾರಣಾ ರಜೆ, ಮಾತೃತ್ವ ರಜೆ, ಪಿತೃತ್ವ ರಜೆ, ವ್ಯಾಸಂಗ ರಜೆಗಳ ಹಾಗೂ ಸಾಂಧರ್ಭಿಕ ರಜೆ ಮೇಲೆ ತೆರಳುವ ಸಂದರ್ಭದಲ್ಲಿ ಸದರಿ ರಜೆಗಳಿಗೆ ಸಂಬಂಧಪಟ್ಟ ಪ್ರಾದೇಶಿಕ ಜಿಂಟಿ ನಿರ್ದೇಶಕರುಗಳಿಂದ ಪೂರ್ವಾನುಮತಿ ಪಡೆಯದೆ ರಜೆಯನ್ನು ಹಾಗೂ ಕೇಂದ್ರ ಸ್ಥಾನ ಬಿಡುತ್ತಿರುವ ಪ್ರಕರಣಗಳ ಮಾಹಿತಿಯು ಈ ಕಛೇರಿಯಲ್ಲಿ ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ಈ ಕುರಿತು ಗಂಭೀರವಾಗಿ ಪರಿಗಣಿಸಲಾಗಿದೆ.
ಪರಿಶೀಲಿಸಲಾಗಿ. ಇನ್ನೂ ಮುಂದೆ ಪ್ರಭಾರ ಪ್ರಾಂಶುಪಾಲರುಗಳು ಯಾವುದೇ ರಜೆಯನ್ನು ಹಾಗೂ ಕೇಂದ್ರ ಸ್ಥಾನ ಬಿಡುವ ಪೂರ್ವದಲ್ಲಿ ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರುಗಳ ಪೂರ್ವಾನುಮತಿ ಪಡೆದು ತೆರಳುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ. ಒಂದು ವೇಳೆ ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರುಗಳ ಪೂರ್ವಾನುಮತಿ ಪಡೆದು ಯಾವುದೇ ರಜೆಯನ್ನು ಹಾಗೂ ಕೇಂದ್ರ ಸ್ಥಾನದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಸದರಿ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮ 1957ರ (ವರ್ಗೀಕರಣ. ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ.