ಬೆಂಗಳೂರು : ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ ಹೆಚ್.ಸಿ ಮಹದೇವಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ ಅಷ್ಟೊಂದು ಹೋರಾಟ ನಡೆಸಿ ಬಾಬಾ ಸಾಹೇಬರು ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಹಾಗೂ ದೇಶದಲ್ಲಿ ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಷ್ಟೊಂದು ಹೋರಾಟ ನಡೆಸಿ ಬಾಬಾ ಸಾಹೇಬರು
ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು.#ObeVoteOneValue pic.twitter.com/iEK1EPnSbr
— Dr H C Mahadevappa(Buddha Basava Ambedkar Parivar) (@CMahadevappa) November 26, 2024