ನವದೆಹಲಿ : ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದರು.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ಮೇಕಿಂಗ್ ಆಫ್ ದಿ ಕಾನ್ ಸ್ಟಿಟ್ಯೂಷನ್ ಆಫ್ ಇಂಡಿಯಾ: ಎ ಗ್ಲಿಂಪ್ಸ್” ಮತ್ತು “ಮೇಕಿಂಗ್ ಆಫ್ ದಿ ಕಾನ್ ಸ್ಟಿಟ್ಯೂಷನ್ ಆಫ್ ಇಂಡಿಯಾ ಮತ್ತು ಅದರ ಅದ್ಭುತ ಪ್ರಯಾಣ” ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ನಾವು ಐತಿಹಾಸಿಕ ಕ್ಷಣದ ಭಾಗವಾಗಿದ್ದೇವೆ, 75 ವರ್ಷಗಳ ಹಿಂದೆ ಇಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು ಎಂದು ಮುರ್ಮು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಹೇಳಿದರು ಮತ್ತು ಸಂವಿಧಾನ ರಚನಾಕಾರರಿಗೆ ಗೌರವ ಸಲ್ಲಿಸಿದರು.
President Droupadi Murmu addresses the joint sitting of both Houses of Parliament on Constitution Day
The President says, “…In the last few years, the government has taken several steps for the welfare of all sections of society, especially the weaker sections. The poor are… pic.twitter.com/68hcGeXp0t
— ANI (@ANI) November 26, 2024
“ಈ ರೀತಿಯ ಆಚರಣೆಗಳು ಮುಂದಿನ ಪ್ರಯಾಣವನ್ನು ಉತ್ತಮಗೊಳಿಸಲು ನಮಗೆ ಅವಕಾಶವನ್ನು ನೀಡುತ್ತವೆ … ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿ ನಾವು ಒಟ್ಟಾಗಿದ್ದೇವೆ ” ಎಂದು 75 ನೇ ಸಂವಿಧಾನ್ ದಿವಸ್ ಸಂದರ್ಭದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು ಹೇಳಿದರು.