alex Certify ALERT : ಸಾರ್ವಜನಿಕರೇ ಎಚ್ಚರ : ಕಲಬೆರಕೆ, ಅಸುರಕ್ಷಿತ ಆಹಾರ ಪದಾರ್ಥಗಳಿಂದ ಜೀವಕ್ಕೆ ಬರಲಿದೆ ಕುತ್ತು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಸಾರ್ವಜನಿಕರೇ ಎಚ್ಚರ : ಕಲಬೆರಕೆ, ಅಸುರಕ್ಷಿತ ಆಹಾರ ಪದಾರ್ಥಗಳಿಂದ ಜೀವಕ್ಕೆ ಬರಲಿದೆ ಕುತ್ತು.!

ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಅಸುರಕ್ಷಿತ ಆಹಾರ ಪದಾರ್ಥಗಳ ಸೇವೆನೆಯಿಂದ ಮಾನವರ ಆರೋಗ್ಯದಲ್ಲಿ ವ್ಯತ್ತಿರಿಕ್ತ ಪರಿಣಾಮಗಳು ಉಂಟಾಗುವ ಹಾಗೂ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಹೊಲದಿಂದ ತಟ್ಟಿಯವರೆಗೆ ಸುರಕ್ಷಿತ ಆಹಾರ ಎಂಬ ಕಲ್ಪನೆಯೊಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆಯುಕ್ತಾಲಯ, ಬೆಂಗಳೂರುರವರ ಸೂಚನೆ ಮೇರೆಗೆ ಪ್ರತೀ ಮಾಹೆಯಲ್ಲಿ ಒಂದೊಂದು ಆಹಾರ ಪದಾರ್ಥಗಳನ್ನು ಗುರಿಯಾಗಿಟ್ಟುಕೊಂಡು ಪ್ರಾಧಿಕಾರವು ವಿಶ್ಲೇಷಣೆಯನ್ನು ನಡೆಸಲಾಗುತ್ತಿದೆ. ಮತ್ತು ಈ ಬಗ್ಗೆ ಪತ್ರಿಕೆ ಮಾದ್ಯಮಗಳಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಆಹಾರ ಪದಾರ್ಥಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿ ಮಾಡುವಾಗ ಎಫ್.ಎಸ್.ಎಸ್.ಎ ನೋಂದಣಿ/ ಪರವಾನಗಿ ನಂ ಇರುವ ಹಾಗೂ ಪದಾರ್ಥ ತಯಾರಿಕಾ ದಿನಾಂಕ, ಬಳಕೆಯ ನಿಗದಿತ ಸಮಯ ಇವುಗಳನ್ನು ಪರೀಕ್ಷಿಸಿಕೊಂಡು ಪದಾರ್ಥಗಳನ್ನು ಖರೀದಿಸುವುದು ಒಳ್ಳೆಯದು.

ಆಕರ್ಷಣೆಗಾಗಿ ಆಹಾರ ಪದಾರ್ಥಗಳಲ್ಲಿ ಕೃತಕಬಣ್ಣಗಳನ್ನು ಸೇರಿಸುತ್ತಿದ್ದು ಇಂತಹ ಆಹಾರ ಪದಾರ್ಥಗಳ ನಿರಂತರ ಸೇವನೆಯಿಂದ ಆನೇಕ ಖಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಆಹಾರ ಪರ್ದಾಥಗಳನ್ನು ಬಳಸದಂತೆ ಮತ್ತು ಜಿಲ್ಲೆಯಲ್ಲಿ ರಸ್ತೆಬದಿಯಲ್ಲಿ ಯಾವುದೇ ಲೇಬಲಿಂಗ್ ಇಲ್ಲದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಲ್ಲಿ (ಉದಾ ಲೇಬಲಿಂಗ್ ಸರಿಯಿಲ್ಲದ ಜೇನು, ತಿಂಡಿ ತಿನಿಸು ಹಾಗೂ ಚಾಕೋಲೇಟ್ ಮತ್ತಿತರ ಆಹಾರ ಪದಾರ್ಥ) ಗಳನ್ನು ಖರೀದಿಸದಂತೆ ಮತ್ತು ಸೇವಿಸದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...