ಇಂಡೋ-ಟಿಬೆಟಿಯನ್ ಬೋರ್ಡ್ ಪೊಲೀಸ್ ಫೋರ್ಸ್ (ಐಟಿಬಿಪಿಎಫ್) ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಷನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ನಿನ್ನೆಯಿಂದ ( ನ.15) ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಹ ಮತ್ತು ಆಸಕ್ತರು recruitment.itbpolice.nic.in ಐಟಿಬಿಪಿಎಫ್ ಅಧಿಕೃತ ವೆಬ್ಸೈಟ್ನಲ್ಲಿ 526 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಐಟಿಬಿಪಿ ಎಸ್ಐ ಮತ್ತು ಕಾನ್ಸ್ಟೇಬಲ್ (ದೂರಸಂಪರ್ಕ) ನೇಮಕಾತಿ, 2024 ರ ಅರ್ಜಿ ವಿಂಡೋ ಡಿಸೆಂಬರ್ 14 ರಂದು ಕೊನೆಗೊಳ್ಳುತ್ತದೆ.
ಹುದ್ದೆಗಳ ವಿವರ
ಸಬ್ ಇನ್ಸ್ಪೆಕ್ಟರ್ (ಟೆಲಿಕಮ್ಯುನಿಕೇಷನ್): 92 ಹುದ್ದೆಗಳು (78 ಪುರುಷ ಮತ್ತು 14 ಮಹಿಳೆ)
ಹೆಡ್ ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಷನ್): 383 ಹುದ್ದೆಗಳು (325 ಪುರುಷ ಮತ್ತು 58 ಮಹಿಳೆ)
ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಷನ್): 51 ಹುದ್ದೆಗಳು (44 ಪುರುಷ ಮತ್ತು 7 ಮಹಿಳೆ)
ಒಟ್ಟು ಹುದ್ದೆಗಳಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರಿಗೆ (ಇಎಸ್ಎಂ) ಮೀಸಲಿಡಲಾಗಿದೆ.
ವಯೋಮಿತಿ
20-25 ವರ್ಷದೊಳಗಿನ ಅಭ್ಯರ್ಥಿಗಳು ಎಸ್ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ 18 ರಿಂದ 25 ವರ್ಷ ಮತ್ತು ಹವಾಲ್ದಾರ್ ಹುದ್ದೆಗಳಿಗೆ 18 ರಿಂದ 23 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಪ್ರತಿ ಹುದ್ದೆಗೆ ಶೈಕ್ಷಣಿಕ ಅರ್ಹತೆಯ ಅವಶ್ಯಕತೆಗಳು ವಿಭಿನ್ನವಾಗಿರುತ್ತವೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬಹುದು.
ನೇಮಕಾತಿ ಪರೀಕ್ಷೆಯಲ್ಲಿ, ದೂರಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಪಡೆದವರಿಗೆ ಐದು ಅಂಕಗಳು, ಡಿಪ್ಲೊಮಾ ಪ್ರಮಾಣಪತ್ರ ಹೊಂದಿರುವವರಿಗೆ ಮೂರು ಅಂಕಗಳು ಮತ್ತು ಐಟಿಐ ಪ್ರಮಾಣಪತ್ರ ಹೊಂದಿರುವವರಿಗೆ ಎರಡು ಅಂಕಗಳನ್ನು ನೀಡಲಾಗುವುದು.
ಸಂಬಳ/ಪೇ ಮ್ಯಾಟ್ರಿಕ್ಸ್:
ಎಸ್ಐ ಹುದ್ದೆಗಳಿಗೆ: 35,400-1,12,400 (ಲೆವೆಲ್ 6)
ಹೆಡ್ ಕಾನ್ಸ್ಟೇಬಲ್ ಹುದ್ದೆಗೆ: 25,500 ರಿಂದ 81,100 (ಲೆವೆಲ್ 4) ಮತ್ತು
ಕಾನ್ಸ್ಟೇಬಲ್ ಹುದ್ದೆಗೆ: 21,700 ರಿಂದ 69,100 (ಲೆವೆಲ್ 3).
ಅರ್ಜಿ ಶುಲ್ಕ: ಎಸ್ಐ ಹುದ್ದೆಗಳಿಗೆ 200 ರೂ., ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ 100 ರೂ. ಮಹಿಳೆಯರು, ಮಾಜಿ ಸೈನಿಕರು, ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಐಟಿಬಿಪಿ ಕಾನ್ಸ್ಟೇಬಲ್ ಮತ್ತು ಎಸ್ಐ (ಟೆಲಿಕಮ್ಯುನಿಕೇಷನ್) ನೇಮಕಾತಿ 2024 ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.