ಆಂಧ್ರಪ್ರದೇಶದಲ್ಲಿ ಘೋರ ದುರಂತ ಸಂಭವಿಸಿದ್ದು, ಫ್ಲೆಕ್ಸ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ನಾಲ್ವರು ಮೃತಪಟ್ಟಿದ್ದಾರೆ.
ಯುವಕರು ತಮ್ಮ ಗ್ರಾಮದಲ್ಲಿ ಸರ್ದಾರ್ ಪಾಪಣ್ಣ ಗೌಡ್ ಅವರ ಪ್ರತಿಮೆ ಅನಾವರಣದ ಸಿದ್ಧತೆಯಲ್ಲಿ ತೊಡಗಿದ್ದರು. ಆದರೆ, ಸೋಮವಾರ ಮುಂಜಾನೆ ಫ್ಲೆಕ್ಸ್ ನಿರ್ಮಿಸುವಾಗ ವಿದ್ಯುತ್ ಸ್ಪರ್ಶದಿಂದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ಉಂಡ್ರಾಜಾವರಂ ಮಂಡಲದ ತಾಡಿಪರ್ರು ಗ್ರಾಮದಲ್ಲಿ ಫ್ಲೆಕ್ಸ್ ನಿರ್ಮಿಸುವಾಗ ವಿದ್ಯುತ್ ಸ್ಪರ್ಶದಿಂದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಬೊಳ್ಳ ವೀರರಾಜು (25), ಕಸಗಣಿ ಕೃಷ್ಣ (23), ಪಮರ್ತಿ ನಾಗೇಂದ್ರ (25) ಮತ್ತು ಮರಿಶೆಟ್ಟಿ ಮಣಿಕಂಠ ಪೆದ್ದಯ್ಯ (29) ಅವರು ಸರ್ದಾರ್ ಪಾಪಣ್ಣ ಗೌಡ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ಲೆಕ್ಸ್ ಗಳನ್ನು ಸ್ಥಾಪಿಸುವ ಮತ್ತು ಪ್ರತಿಮೆಗಳನ್ನು ಅನಾವರಣಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ನಾಲ್ವರು ಪ್ಲೆಕ್ ಕಟ್ಟಲು ಪ್ರಯತ್ನಿಸುತ್ತಿದ್ದಾಗ, ಪಕ್ಕದ ವಿದ್ಯುತ್ ತಂತಿ ಟಚ್ ಆಗಿ ನಾಲ್ವರು ಯುವಕರು ಆಘಾತಕ್ಕೊಳಗಾಗಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತನುಕು ಪ್ರದೇಶ ಆಸ್ಪತ್ರೆಗೆ ಸಾಗಿಸಲಾಗಿದೆ.ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಪಘಾತ ಸಂಭವಿಸಿದ ವಿಧಾನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ತಾಡಿಪರ್ರು ಗ್ರಾಮದಲ್ಲಿ ಸರ್ದಾರ್ ಪಾಪಣ್ಣ ಗೌಡ್ ಅವರ ಪ್ರತಿಮೆಯ ಅನಾವರಣವು ಮೊದಲಿನಿಂದಲೂ ವಿವಾದದ ವಿಷಯವಾಗಿದೆ. ಎರಡು ಸಮುದಾಯಗಳ ನಡುವೆ ಘರ್ಷಣೆಗಳು ಸಹ ಉದ್ಭವಿಸಿದವು. ಅಂತಿಮವಾಗಿ, ಸಚಿವ ಕಂದುಲಾ ದುರ್ಗೇಶ್, ಜಿಲ್ಲಾಧಿಕಾರಿ, ಆರ್ಡಿಒ, ಹಲವಾರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಉಪಕ್ರಮದಿಂದ ಸಮಸ್ಯೆಯನ್ನು ಪರಿಹರಿಸಲಾಯಿತು. ದುರದೃಷ್ಟವಶಾತ್ ಸೋಮವಾರ ವಿಗ್ರಹದ ಅನಾವರಣ ಮತ್ತು ಅನ್ನ ಸಮಾರಾಧನಾ ಪೂಜೆಗೆ ವ್ಯವಸ್ಥೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.