ಬೆಂಗಳೂರು : ಸೆಲ್ಪಿ ಕ್ಲಿಕ್ಕಿಸಿ ‘ಕನ್ನಡದ ಡಿಜಿಟಲ್ ಅಭಿಯಾನ’ದಲ್ಲಿ ಭಾಗಿಯಾಗಿ ಎಂದು ಕನ್ನಡಿಗರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ” ನಮ್ಮ ಹೆಮ್ಮೆಯ ಕರುನಾಡು ಕಲೆ, ಸಾಹಿತ್ಯದ ತವರೂರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಕರ್ನಾಟಕ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ಈ ಬಾರಿ ವಿಭಿನ್ನವಾಗಿ, ವಿಶೇಷವಾಗಿ ಡಿಜಿಟಲ್ ರೂಪದಲ್ಲೂ ನಾವೆಲ್ಲರೂ ಕನ್ನಡ ರಾಜ್ಯೋತ್ಸವ ಆಚರಿಸೋಣ. ಕನ್ನಡದ ಕಂಪು ಡಿಜಿಟಲ್ ಜಗತ್ತಿಗೆ ಸಾರುವ ಇನ್ಸ್ಟಾಗ್ರಾಮ್ನ ‘ಕನ್ನಡ ಫಿಲ್ಟರ್’ ಬಳಸಿ ಸೆಲ್ಪಿ ತೆಗೆದುಕೊಳ್ಳುವ ಮೂಲಕ ನಾನು ಈ ಡಿಜಿಟಲ್ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ನೀವೂ ಕೂಡ ಈ ಡಿಜಿಟಲ್ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ “ನಾನೂ ಹೆಮ್ಮೆಯ ಕನ್ನಡಿಗ” ಎಂದು ಗರ್ವದಿಂದ ಹೇಳಿ. ‘ಕನ್ನಡದ ಕಂಪನ್ನು’ ಸಾರುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಸಂಭ್ರಮಿಸೋಣ” ಎಂದು ಕನ್ನಡಿಗರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.